 |
1$ to 1₹🤑
|
ನಿಮಗಿದು ಗೊತ್ತಾ?:
1947 ನಮ್ಮ ಭಾರತದ 1 ರೂಪಾಯಿಯ ಮೌಲ್ಯವು 1 ಡಾಲರ್ಗೆ ಸಮವಾಗಿತ್ತು ಆದರೆ ಸಮಯ ಕಳೆದಂತೆ ಈ ಪರಿಸ್ಥಿತಿ ಬದಲಾಯಿತು, 1966 ರಲ್ಲಿ 1 ಡಾಲರ್ 4.67₹ ಗೆ ಸಮನಾದರೆ ಇಂದು ನಾವು 1ಡಾಲರ್ ಪಡೆಯಲು ₹93.23 ರೂಪಾಯಿ ಕೊಡಬೇಕಾಗಿದೆ, ಹಾಗಾದರೆ ಈ ದೊಡ್ಡ ಮೌಲ್ಯ ಏಕಾಯಿತು ರೂಪಾಯಿ ಮೌಲ್ಯ ಕುಸಿಯಲು ಕಾರಣವೇನು? ಇದು ನಿಜಕ್ಕೂ ಬ್ರಿಟಿಷರ ಆಟವಿರಬಹುದಾ? ಅಥವಾ ಬೇರೇನಾದ್ರೂ ಇದಿಯಾ?
 |
| 📉 |
ನಮ್ಮ 1ರೂಪಾಯಿ 1 ಡಾಲರ್ ಆದರೆ ಏನಾಗಬಹುದು? ಭಾರತದ ಪ್ರತಿಯೊಬ್ಬ ಬಡವನು ರಾತ್ರೋರಾತ್ರಿ ಶ್ರೀಮಂತ ನಾಗಿಬಿಡುತ್ತಾನೆ.ಉದಾಹರಣೆಗೆ ಇಂದು 20 ಸಾವಿರ ಸಂಪಾದಿಸುವರ ಸಂಬಳ 16 ಲಕ್ಷ ರೂಪಾಯಿ ಆಗಿಬಿಡುತ್ತದೆ, ಲಕ್ಷಾಂತರಗಳಲ್ಲಿ ಆಟವಾಡುವ ಜನರು ಕೋಟ್ಯಂತರಗಳಲ್ಲಿ ಅಥವಾಡುತ್ತಾರೆ ಅಷ್ಟೇ ಅಲ್ಲ ಇಂದು ಪ್ರತಿ ಲೀಟರ್ 102 ₹ ರೂಪಾಯಿ ಇರುವ ಪೆಟ್ರೋಲ್ ಕೇವಲ ₹ 50 ಕ್ಕೆ ಆಗಿಬಿಡುತ್ತೆ. ಸರ್ಕಾರ ಯಾಕೆ ಒಂದು ಡಾಲರ್ ಅನ್ನು 1 ರೂಪಾಯಿ ಮಾಡುತ್ತಿಲ್ಲ ನೋಟು ಮುದ್ರಿಸುವ ಅಧಿಕಾರ ಸರ್ಕಾರದ ಕೈಯಲ್ಲಿರುವಾಗ 1 ರೂಪಾಯಿ ಅಂದ್ರೆ 1 ಡಾಲರ್ ಮಾಡುತ್ತಿಲ್ಲ? ತಜ್ಞರ ಪ್ರಕಾರ ಕರೆನ್ಸಿ ಯ ಮೌಲ್ಯ ದೃಬಲಾವಾಗೆ ಇರುವುದು ಭಾರತಕ್ಕೆ ಹೆಚ್ಚು ಲಾಭದಾಯಕ ಕರೆನ್ಸಿ ಬದಲಾದರೆ ದೇಶ ಬದಲಾಗುತ್ತದೆ ಎನ್ನುವುದು ಸತ್ಯ ಆದರೆ ಅರ್ಥಶಾಸ್ತ್ರದಲ್ಲಿ ಇದು ಅಷ್ಟು ಸುಲಭವಲ್ಲ ಇದು ಒಂದು ವಿಚಿತ್ರವಾದ ಪ್ಯಾರಡಾಸ್ಕ್ ಆಗಿದೆ.
ದೃರ್ಬಲ ಕರೆನ್ಸಿಯಿಂದ ನಮ್ಮ ರಫ್ತುಗಳು ಹೆಚ್ಚಾಗುತ್ತವೆ, ಬೇರೆ ದೇಶಗಳಿಗೆ ಭಾರತದ ರಫ್ತುಗಳು ಅಗ್ಗವಾಗಿ ಸಿಗುವುದರಿಂದ ಅವುಗಳ ಬೆಲೆ ಹೆಚ್ಚಾಗುತ್ತದೆ ಇದರಿಂದ ನಮ್ಮ ದೇಶಕ್ಕೆ ವಿದೇಶಿ ಕರೆನ್ಸಿ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ ಉದ್ಯೋಗ ಸೃಷ್ಟಿಯಾಗುತ್ತದೆ ಜೊತೆಗೆ ಆರ್ಥಿಕತೆ ಬಲವಾಗುತ್ತದೆ ಆದರೆ ಮತ್ತೊಂದು ಹೊಸದೆಂದರೆ ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು ಉದಾಹರಣೆ : ಕಚ್ಚಾ ತೈಲ, ಎಲ್ಲಿಟ್ರಾನಿಕ್ ಉಪಕರಣಗಳು ದುಬಾರಿಯಾಗುತ್ತವೆ. ಆರ್ಥಿಕತೆಯ ರಹಸ್ಯವನ್ನು ನೋಡುವುದಾದರೆ ನಮ್ಮ ಆರ್ಥಿಕತೆಯ ಕುಸಿತಕ್ಕೆ ನಿಜವಾದ ಹೊರೆಗಾರರು ನಮ್ಮದೇ ಸರ್ಕಾರ ಹಾಗೂ ಅದರ ನೀತಿಗಳು. ಒಂದು ದೇಶದ ಕರೆನ್ಸಿಯ ಮೌಲ್ಯವು ಎರಡು ಮುಖ್ಯ ಪದ್ದತಿಯು ಮೇಲೆ ನಿರ್ಧಾವಾಗುತ್ತದೆ. 1 FIXED EXCHANGE RATE SYSTEM (ಇಲ್ಲಿ ಸರ್ಕಾರವೇ ಕರೆನ್ಸಿ ಮೌಲ್ಯವನ್ನ ನಿಗದಿ ಪಡಿಸುತ್ತದೆ), 2 FEXIBAL EXCHANCE RATE SYSTEM (ಇಲ್ಲಿ ಮಾರುಕಟ್ಟೆಯ ಬೇಡಿಕೆ, ಪೂರೈಕೆಯ ಮೇಲೆ ಕರೆನ್ಸಿಯ ಮೌಲ್ಯ ಏರಿಳಿತ ಕಾಣುತ್ತದೆ.

1947-1966 ರ ಹೊತ್ತಿಗೆ ಭಾರತವು 1 ಡಾಲರ್ ಅಂದರೆ 4.76 ರೂಪಾಯಿ ಎಂಬ ಮೌಲ್ಯವನ್ನು ಉಳಿಸಿಕೊಂಡಿತ್ತು ಆದರೆ 1966 ರಲ್ಲಿ ಭಾರತ ಏಕಾಏಕಿ ಕರೆನ್ಸಿಯ ಮೌಲ್ಯವನ್ನು 50%ದಷ್ಟು ಇಳಿಸಿ 1 ಡಾಲರ್ ಅಂದ್ರೆ 7.50 ರೂಪಾಯಿಗೆ ತಂದಿಟ್ಟಿತು. ಇದಕ್ಕೆ ಪ್ರಮುಖ ಕಾರಣಗಳು ಆರ್ಥಿಕ ಬಿಕ್ಕಟ್ಟು ವಿದೇಶಿ ಸಾಲಗಳು ಹೆಚ್ಚಾಗಿದ್ದು ಹಾಗೂ ಆಗಿನ ಸರ್ಕಾರದ ಕೆಲವು ಆರ್ಥಿಕ ನೀತಿಗಳು. ಆರ್ಥಿಕ ನೀತಿಯನ್ನು ಸುಧಾರಿಸಲು 1993ರಲ್ಲಿ ಭಾರತವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಅದು FLEXIBLE EXCHANGE RATE SYSTEM ಅನ್ನು ಅಳವಡಿಸಿಕೊಂಡಿತು. ಅಂದರೆ ಅಂದಿನಿಂದ ರೂಪಾಯಿಯ ಮೌಲ್ಯ ಮಾರುಕಟ್ಟೆಯ ಬೇಡಿಕೆ ಪೂರೈಕೆಯ ಮೇಲೆ ಅವಲಿಂಬಿತವಾಗಿದೆ. 1 ರೂಪಾಯಿ ಅಂದರೆ 1 ಡಾಲರ್ ಎಂದು ಕನಸು ಕಾಣುವುದು ಸುಲಭ ಆದರೆ ಅದು ವಾಸ್ತವವಾಗಿ ಆರ್ಥಿಕ ಸ್ಥಿತಿ ವಿದೇಶಿ ವೈವಾಟು ಜಾಗತಿಕ ಮಾರುಕಟ್ಟೆ ಇವೆಲ್ಲವೂ ರುಪಾಯಿಯ ಮೌಲ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಬಲವಾದ ದೇಶವೆಂದರೆ ಬಲವಾದ ಕರೆನ್ಸಿ ಇರುವ ದೇಶವೆಂದಲ್ಲ ದುರ್ಬಲ ಕರೆನ್ಸಿ ಇದ್ದರೆ ದುರ್ಬಲ ದೇಶ ಎಂಬ ಅರ್ಥವಲ್ಲ.


ಕರೆನ್ಸಿ ಎಂದರೆ ಬೇರೇನೂ ಅಲ್ಲ ಅದು ಒಂದು ಆರ್ಥಿಕ ಸಾಧನ. ಪ್ರತಿಯೊಂದು ದೇಶದ ಕೇಂದ್ರೀಯ ಬ್ಯಾಂಕ್ ಅದನ್ನು ಬಳಸುತ್ತದೆ ನಮ್ಮ ಭಾರತದಲ್ಲಿ ಅದು Reserve Bank of India ಕರೆನ್ಸಿಯು ದೇಶದ ಆರ್ಥಿಕತೆಯಲ್ಲಿ ವಿನಿಮಯ ಮಾಧ್ಯಮವಾಗಿ ಮೌಲ್ಯದ ಅಳತೆ ಗೋಲಾಗಿ ಹಾಗೂ ಸಂಪತ್ತನ್ನು ಶೇಖರಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಇದು ದೇಶದ ಆರ್ಥಿಕತೆಯನ್ನು ಸ್ಥಿರತೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳು ಆರಂಭವಾದವು ಆದರೆ 1962 ರ ಇಂಡೋ ಚೀನಾ ಯುದ್ಧ ಹಾಗೂ 1965 ರ ಇಂಡೋಪಾಕ್ ಯುದ್ಧದಂತಹ ಘಟನೆಗಳು ನಮ್ಮ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದವು ದೇಶದ ಆರ್ಥಿಕತೆ ತೀರವಾಗಿ ಹದಗೆಟ್ಟಿತು ಇದರಿಂದ ಸಾಲಗಳನ್ನು ತೀರಿಸಲು ನಮ್ಮ ದೇಶಕ್ಕೆ ವಿದೇಶಿಯ ಸಾಲದ ಅಗತ್ಯವಿತ್ತು ಆದರೆ ಆ ಸಾಲವನ್ನು ತೀರಿಸಲು ನಮ್ಮ ದೇಶದ ಬಳಿ ಸಾಕಷ್ಟು ಹಣವಿರಲಿಲ್ಲ ಈ ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿತು ರೂಪಾಯಿ ಅನ್ನು ಡಾಲರ್ ಮೌಲ್ಯಕ್ಕೆ ಇಳಿಸುವುದು 1 ರೂಪಾಯಿ ಅಂದರೆ 4.76 ಆಗಿದ್ದ ಮೌಲ್ಯವನ್ನು 1 ರೂಪಾಯಿ ಅಂದರೆ 7.50 ಗೆ ಇಳಿಸಲಾಯಿತು. ಇದರ ಹಿಂದಿನ ಉದ್ದೇಶ ವಿದೇಶಿ ಹೂಡಿಕೆಯನ್ನು ಆಕರ್ಷಣೆ ಮಾಡುವುದು ಇದರಿಂದ ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಜೊತೆಗೆ ವಿದೇಶಿ ಸಾಲಗಳನ್ನು ತೀರಿಸಲು ಅವಕಾಶ ಸಿಗುತ್ತದೆ ಆದರೆ ಇದರಿಂದ ಸಮಸ್ಯೆಗಳು ಸಂಪೂರ್ಣವಾಗಿ
ನಿವಾರಣೆಯಾಗದಾಯಿತು.
|
1991ರ ಆರ್ಥಿಕ ಬಿಕ್ಕಟ್ಟು ಭಾರತವನ್ನು ಮತ್ತೊಮ್ಮೆ ಸಂಕಷ್ಟಕ್ಕೆ ತಳ್ಳಿತು ಅಂದಿನಿಂದ ಇಂದಿನವರೆಗೂ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಲೇ ಬಂದಿದೆ, ಉದಾಹರಣೆಗೆ 2016ರಲ್ಲಿ ಭಾರತ ತನ್ನ ಡಾಲರ್ ಎದುರು ಸುಮಾರು |
-6% ಡಿ ವ್ಯಾಲ್ಯೂ ಮಾಡಿತ್ತು. ಮುಂದಿನ 10,20,25 ವರ್ಷದಲ್ಲಿ ಭಾರತದ ಕರೆನ್ಸಿ ಬಲವಾಗುತ್ತದೆ ಅನ್ನುವುದಕ್ಕೆ ಏನು ಗ್ಯಾರಂಟಿ ಇದೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಕರೆನ್ಸಿ ಮೌಲ್ಯ ಏರಿದರೂ ಇಳಿದರು ನಮ್ಮ ಜೀವನ ಹಣ ಸಂಪಾದನೆ ಉಳಿತಾಯ ಹಾಗೂ ನಿವೃತ್ತಿಯತ್ತ ಸಾಗುತ್ತದೆ, ಹಾಗಾಗಿ ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ಮಾಡಿಕೊಳ್ಳುವುದು ಹೇಗೆ? ಕರೆನ್ಸಿಯ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವಾಗ ಏನು ಮಾಡಬೇಕು ನಮ್ಮ ಕರೆನ್ಸಿಯ ಮೌಲ್ಯ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಕುಸಿಯುತ್ತಿದೆ ಹಾಗಾದರೆ ಭವಿಷ್ಯದಲ್ಲಿ ಕರೆನ್ಸಿಯ ಮೌಲ್ಯ ಏರಿಕೆಯಾಗುವ ಹಾಗೂ ಬಲವಾಗುವ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದರೆ ಹೇಗೆ ಇದು ಒಂದು ದೊಡ್ಡ ಆರ್ಥಿಕ ತಂತ್ರ ಯಾಕೆಂದರೆ ನಮ್ಮ ಕೈಯಲ್ಲಿ ಇರುವುದು ನಗದು ವರ್ಷದಿಂದ ವರ್ಷಕ್ಕೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.
ಒಂದು ವೇಳೆ ನಮ್ಮ ಸರ್ಕಾರ ಇಂದಿನ ರಾತ್ರಿಯಿಂದ ಒಂದು ರೂಪಾಯಿ ಒಂದು ಡಾಲರ್ ಗೆ ಸಮ ಎಂದು ಘೋಷಣೆ ಹೊರಡಿಸಿದರೆ ಏನಾಗಬಹುದು? ಉದಾಹರಣೆಗೆ ₹10000 ಸಂಬಳ ಪಡೆಯುವ ವ್ಯಕ್ತಿಯ ಸಂಪಾದನೆ ₹8,30,000 ಆಗಿಬಿಡಬಹುದು. ಇದರಿಂದ ಭಾರತಕ್ಕೆ ನಿಜವಾಗಿಯೂ ಲಾಭವಾಗುತ್ತದೆಯೇ? ಅಥವಾ ಆರ್ಥಿಕ ಬಿಕ್ಕಟ್ಟನ್ನು ತರಬಹುದೇ ? ಒಂದು ರೂಪಾಯಿ ಒಂದು ಡಾಲರ್ ಗೆ ಸಮನಾದರೆ ದೇಶದ ಆರ್ಥಿಕತೆಯಲ್ಲಿ ಏನೆಲ್ಲ ಲಾಭ ಸಿಗಬಹುದು?
1. ಆಮದು ಅಗ್ಗವಾಗುತ್ತದೆ ಭಾರತ ತನ್ನ ದೇಶದ ಶೇಕಡಾ 85% ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ 2020ರಲ್ಲಿ 74 ಮಿಲಿಯನ್ ಟನ್ ಹಾಗೂ 2021 ರಲ್ಲಿ 84 ಮಿಲಿಯನ್ ಟನ್ ಆಮದು ಮಾಡಿಕೊಳ್ಳಲು ಭಾರತ ಕೋಟಿ ರೂಪಾಯಿ ಮೊತ್ತದ ಹಣವನ್ನು ಖರ್ಚು ಮಾಡಿತ್ತು, ಉದಾಹರಣೆಗೆ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 100 ಡಾಲರ್ ಎಂದು ಅಂದುಕೊಂಡರೆ ಇಂದಿನ ಪರಿಸ್ಥಿತಿಯಲ್ಲಿ ನಾವು ಅದನ್ನು ಖರೀದಿಸಲು ಸುಮಾರು ₹8700 ಕೊಡಬೇಕು ಆದರೆ ಒಂದು ರೂಪಾಯಿ ಒಂದು ಡಾಲರ್ ಗೆ ಸಮನಾದಾಗ ಅದನ್ನು ಕೇವಲ ₹100 ಕ್ಕೆ ಖರೀದಿಸಬಹುದು.
2. ಬೆಲೆಗಳು ಕಡಿಮೆಯಾಗುತ್ತವೆ ಕಚ್ಚಾಲದ ಬೆಲೆ ಕಡಿಮೆಯಾದಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ತಕ್ಷಣವಾಗಿ ಕುಸಿಯುತ್ತವೆ ಇದರಿಂದ ಟ್ರಾನ್ಸ್ಪೋರ್ಟ್ ಖರ್ಚು ಕಡಿಮೆಯಾಗಿ ದಿನನಿತ್ಯದ ವಸ್ತುಗಳ ಬೆಲೆಯೂ ಕೂಡ ಇಳಿಯುತ್ತವೆ ಇದು ಸಾಮಾನ್ಯ ಜನರ ಬದುಕಿನ ಜೀವನಕ್ಕೆ ದೊಡ್ಡ ಮಟ್ಟಿನ ಸಹಾಯವಾಗುತ್ತದೆ.
3. ಆರ್ಥಿಕ ಸ್ಥಿತಿ ಸುಧಾರಣೆ ರೂಪಾಯಿಯ ಮೌಲ್ಯವು ಸುಮಾರು 87 ರಷ್ಟು ಹೆಚ್ಚಾದರೆ ಜನರ ಆದಾಯವು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಸಾವಿರ ರೂಪಾಯಿ ಸಂಪಾದಿಸುವವರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ ಇದರಿಂದ ದೇಶದಲ್ಲಿ ಖರೀದಿಸುವ ವಸ್ತುಗಳ ಸಂಖ್ಯೆ ಹೆಚ್ಚಾಗಿ ದೇಶದ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗುತ್ತವೆ.
4.ವಿದೇಶಿ ಪ್ರವಾಸ ಸುಲಭ ವಿದೇಶಕ್ಕೆ ಹೋಗುವುದು ಎಲ್ಲರ ಕನಸಾಗಿರುತ್ತದೆ ಆದರೆ ಇದು ಪ್ರಸ್ತುತ ವೆಚ್ಚದಾಯಕವಾಗಿರುತ್ತದೆ ಒಂದು ವೇಳೆ ರೂಪಾಯಿ ಬೆಲೆ ಡಾಲರ್ ಗೆ ಸಮನಾದರೆ ವಿದೇಶಿ ಪ್ರವಾಸ ಬಡವರಿಗೆ ಸುಲಭವಾದ ದರದಲ್ಲಿ ದೊರೆಯುತ್ತದೆ ಅಮೆರಿಕಕ್ಕೆ ಹೋಗಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದಾರೆ ಅದು ಈಗ ನೂರಾರು ರೂಪಾಯಿಗಳಲ್ಲಿ ಮುಗಿದು ಹೋಗಬಹುದು ರೂಪಾಯಿ ಬೆಲೆ ಡಾಲರ್ ಗೆ ಸಮನಾದರೆ ಭಾರತೀಯರಿಗೆ ಸಿಗುವ ಅತ್ಯಂತ ದೊಡ್ಡವಾದ ಲಾಭ ಯಾವುದು ಗೊತ್ತಾ? ವಿದೇಶಿ ವಿನಿಮಯ ದರ ವ್ಯತ್ಯಾಸದಿಂದಾಗಿ ಹಣ ಉಳಿತಾಯ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಹೆಚ್ಚು ಸಂಬಳ ಹೆಚ್ಚು ಸಿಗುತ್ತಿದ್ದರೆ ಯಾರು ವಿದೇಶಕ್ಕೆ ಹೋಗಲು ಬಯಸುತ್ತಿರಲಿಲ್ಲ ಅಂತಹ ಉತ್ತಮ ಪರಿಸ್ಥಿತಿ ನಮ್ಮಲ್ಲಿದ್ದರೆ ಯಾರು ದೇಶ ಬಿಟ್ಟು ಹೋಗಲು ಬಯಸುವುದಿಲ್ಲ ರೂಪಾಯಿ ಬೆಲೆ ಡಾಲರ್ ಗೆ ಸಮನಾದರೆ ಬುದ್ದಿವಂತರು ದೇಶದಲ್ಲಿ ಉಳಿಯುತ್ತಾರೆ ಇದರಿಂದಾಗಿ ಬ್ರೆಡ್ ರೇನ್ ಸಂಪೂರ್ಣವಾಗಿ ನಿಲ್ಲುತ್ತದೆ ಅಂದ ವ್ಯಕ್ತಿಗಳು ಭಾರತದಲ್ಲಿ ಕೆಲಸ ಮಾಡುವುದರಿಂದ ದೇಶದ ಅಭಿವೃದ್ಧಿಯು ಬೆಳವಣಿಗೆಯು ಬೆಳೆಯುತ್ತದೆ.
ರೂಪಾಯಿ ಮೌಲ್ಯ ಡಾಲರ್ ಗೆ ಸಮನಾದರೆ ಅದರಿಂದ ಅನುಕೂಲ ಮಾತ್ರ ಅಲ್ಲ ಕೆಲವು ಅನಾನುಕೂಲಗಳನ್ನು ತರುತ್ತದೆ, ಆಮದು ಅಗ್ಗವಾಗುತ್ತದೆ ರಫ್ತು ಸಂಪೂರ್ಣವಾಗಿ ಖುಷಿಯುತ್ತದೆ 2018 19 ರಲ್ಲಿ ನಮ್ಮ ರಫ್ತೆಗಳು ಜಿಡಿಪಿಗೆ ಶೇಕಡ 31%ರಷ್ಟು ಕೊಡುಗೆ ನೀಡಿದ್ದರೆ 2019-20 ರಲ್ಲಿ ಶೇಕಡ 27ರಷ್ಟು ಕುಸಿದಿತ್ತು. ಒಂದು ರೂಪಾಯಿ ಒಂದು ಡಾಲರ್ ಗೆ ಸಮನಾದರೆ ರಫ್ತುಗಳಿಗೆ ಬಾರಿ ನಷ್ಟವಾಗುತ್ತದೆ ಇದರಿಂದ ಜಿಡಿಪಿ ಕುಸಿಯುತ್ತದೆ ಬೇರೆ ದೇಶಗಳು ನಮ್ಮ ದೇಶದಿಂದ ಕೊಂಡುಕೊಳ್ಳಲು ಮುಖ್ಯ ಕಾರಣವೇನೆಂದರೆ ನಮ್ಮ ದೇಶದ ರೂಪಾಯಿ ಬೆಲೆ ಕಡಿಮೆ ಇರುವುದರಿಂದ ಅವರಿಗೆ ಹೆಚ್ಚು ಸರಕುಗಳು ದೊರೆಯುತ್ತವೆ ಒಂದು ವೇಳೆ ರೂಪಾಯಿ ಡಾಲರ್ ಗೆ ಸಮನಾದರೆ ಭಾರತದಿಂದ ಅವರಿಗೆ ರಫ್ತು ಮಾಡಿಕೊಳ್ಳುವುದು ದುಬಾರಿಯಾಗುತ್ತದೆ, ಇದರಿಂದಾಗಿ ನಮ್ಮ ರಫ್ತುಗಳು ಕುಸಿದು ಹೋಗುತ್ತವೆ. ರೂಪಾಯಿ ಡಾಲರ್ ಗೆ ಸಮನಾದರೆ ಬಡವರಿಗೆ ಸಹಾಯವಾಗುತ್ತದೆ ಆದರೆ ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರತ್ತುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಇದು ಭಾರತದ ಆರ್ಥಿಕತೆಗೆ ದೊಡ್ಡ ಪ್ರಮಾಣದ ಅಪಾಯ ತಂದುಡ್ಡಬಹುದು . ಒಂದು ವೇಳೆ ರೂಪಾಯಿ ಡಾಲರ್ ಗೆ ಸಮನಾದರೆ ಬೇರೆ ಭಾರತವನ್ನು ಬಿಟ್ಟು ಬೇರೆ ದೇಶದಿಂದ ರಪ್ತನ್ನು ಖರೀದಿಸಬಹುದು. ಬ್ಯಾಂಕಿಂಗ್ ಹಾಗೂ ಐಟಿ ಕ್ಷೇತ್ರಕ್ಕೂ ಇದರಿಂದ ದೊಡ್ಡ ಪ್ರಮಾಣದ ಹೊಡೆತ ಬೀಳುತ್ತದೆ.
ಅಮೇರಿಕಾ ಒಂದು ಅಭಿವೃದ್ಧಿ ಹೊಂದಿದ ದೇಶ ಅದರ ಡಾಲರ್ ವಿಶ್ವದ ಅತ್ಯಂತ ಪ್ರಮುಖ ಕರೆನ್ಸಿಗಳಲ್ಲಿ ಒಂದು, ಜಪಾನ್ ಇದರ ಕರೆನ್ಸಿ ಮೌಲ್ಯ ಭಾರತಕ್ಕಿಂತಲೂ ಕಡಿಮೆ ಇದೆ ಒಂದು ರೂಪಾಯಿಗೆ ಒಂದು ಪಾಯಿಂಟ್ ಐದು ಸೊನ್ನೆ ಎನ್ ಸಿಗುತ್ತದೆ ಆದರೂ ಜಪಾನ್ ವಿಶ್ವದ ಅತ್ಯಂತ ಯಶಸ್ವಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಹೀಗಿರುವಾಗ ಭಾರತ ಹಕ್ಕು ಜಪಾನ್ ಎರಡು ದೇಶಗಳಲ್ಲಿ ಯಾವ ದೇಶ ಅಭಿವೃದ್ಧಿ ಹೊಂದಿದ ಎಂದು ಹೇಳುವ ಅಗತ್ಯವಿಲ್ಲ ಭಾರತದ ರೂಪಾಯಿ ಬಲವಾಗಿರಲಿ ಅಥವಾ ದುರ್ಬಲವಾಗಿರಲಿ ಅದಕ್ಕೂ ಅದರ ಅಭಿವೃದ್ಧಿಗೂ ನೇರವಾಗಿ ಸಂಬಂಧವಿಲ್ಲ ಕರೆನ್ಸಿ ಮೌಲ್ಯವು ಕೇವಲ ಒಂದು ಆರ್ಥಿಕ ಮೌಲ್ಯದ ಸಂಕೇತ ಮಾತ್ರ.
ಕರೆನ್ಸಿ ಬೆಳೆದರೆ ದೇಶ ಬೆಳೆಯುತ್ತದೆ ಎನ್ನುವುದುಕ್ಕಿಂತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದರೆ ದೇಶ ಬೆಳೆಯುತ್ತದೆ ಎಂದು ಹೇಳಬಹುದು
Nice information 😊
ReplyDelete