Thursday, 26 March 2026

THE BIG BULL HARSHAD MEHTA

                                                    

THE BIGG BULL

1980 ರಲ್ಲಿ Bombay stock exchange ನಲ್ಲಿ ಕಾಲಿಟ್ಟು ಮುಂದಿನ 10 ವರ್ಷಗಳಲ್ಲಿ ಮಾಮೂಲಿ ಉದ್ಯೋಗಿ ಇಂದ ಹಿಡಿದು ಷೇರು ಮಾರುಕಟ್ಟೆಯ ಬಿಗ್ ಬುಲ್ ಆಗಿ 15 square feet ಬಂಗಲೆ ಲಕ್ಸೂರಿ ಕಾರುಗಳು ಐಷಾರಾಮಿ ಆಫೀಸ್ ಇವೆಲ್ಲದರ ಮಾಲಿಕರಾಗಿ ಬೆಳೆದು ಹಾಗೆ ಎಷ್ಟು ವೇಗವಾಗಿ ಎತ್ತರಕ್ಕೆ ಏರಿದನು ಹಾಗೆ ಅಷ್ಟೇ ವೇಗವಾಗಿ ಆತನ ಸಾಮ್ರಾಜ್ಯ ಕುಸಿದಿತ್ತು ಹಾಗಾದರೆ ಈ ವ್ಯಕ್ತಿ ಯಾರೆಂಬುದರ ಬಗ್ಗೆ ನಿಮಗೆ ಎಷ್ಟು ಗೊತ್ತು?

Harshad Metha ಜೀವನ ಚರಿತ್ರೆ :

1973 ರ ರಾಯಪುರದಲ್ಲಿ 18 ವರ್ಷದ ಹರ್ಷದ್ ತೀವ್ರ ಹತಾಶಗೊಂಡಿದ್ದರು. ಅವರ ತಂದೆಯ ಆರೋಗ್ಯ ಮತ್ತು ವ್ಯಾಪಾರ ಎರಡು ಸಹ ಹದಗೆಟ್ಟಿತ್ತು ಹರ್ಷದ್ ಈ ಒಂದು ಪರಿಸ್ಥಿತಿಯನ್ನು ಬದಲಾಯಿಸಲು ಬಯಸಿದ್ದರು ಆದ್ದರಿಂದ ತಮ್ಮ ಅದೃಷ್ಟವನ್ನು ಮುಂಬೈ ಮಹಾನಗರಿಯಕ್ಕೆ ಹೊರಟಿದ್ದರು, ಕನಸುಗಳ ನಗರ ಮುಂಬೈನ ಲಾಲ್ ಲಜಪತ್ ರಾಯ್ ಕಾಲೇಜಿನಲ್ಲಿ ಅಡ್ಮಿಷನ್ ಸಿಕ್ಕಿತ್ತು ಕಾಲೇಜಿಗೆ ಹೋಗುವ ಜೊತೆಯಲ್ಲಿ ಅವರು ಚಿಕ್ಕ ಪುಟ್ಟ ಕೆಲಸಗಳನ್ನು ಸಹ ಮಾಡುತ್ತಿದ್ದರು. ಪ್ಲಾಸ್ಟಿಕ್ ಮತ್ತು ಸ್ಕ್ರಾಪ್ ಕಲೆಕ್ಟ್ ಮಾಡಿ ಮಾರುವುದರಿಂದ ಹಿಡಿದು ಸಿಮೆಂಟ್ ವ್ಯಾಪಾರದವರೆಗೂ ಹಲವಾರು ಕೆಲಸಗಳನ್ನು ಮಾಡುತ್ತಿದ್ದರು. 1972ರಲ್ಲಿ ಕಾಲೇಜ್ ಮುಗಿದ ನಂತರ ನ್ಯೂ ಇಂಡಿಯನ್ ಅಸುರೆನ್ಸ್  ಕಂಪನಿಯಲ್ಲಿ 600 ಸಂಬಳಕ್ಕೆ ಕ್ಲರ್ಕ್ ಆಗಿ ಸೇರಿಕೊಂಡರು. ನಂತರ ತನ್ನ ಇಡೀ ಫ್ಯಾಮಿಲಿಯನ್ನು ರಾಯಪುರದಿಂದ ಮುಂಬೈಗೆ ಕರೆಸಿಕೊಂಡಿದ್ದರು ತನ್ನ ಸಹೋದರ ಅಶ್ವಿನ್ ಮೆಹತಾಗೆ  ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ಕೊಡಿಸಿದ್ದರು, ಕೆಲಸದ ಜೊತೆಯಲ್ಲಿ ಇಬ್ಬರೂ ಸಹ ಸೈಡ್ ಬಿಸಿನೆಸ್ ಅನ್ನು ಮಾಡುತ್ತಿದ್ದರು ಆದರೆ ಮುಂದಿನ ಎರಡು ವರ್ಷಗಳಲ್ಲಿ ಅನೇಕ ವ್ಯವಹಾರಗಳನ್ನು ಮಾಡಲು ಪ್ರಯತ್ನ ಪಟ್ಟರು ಕೂಡ ಅವರು ದೊಡ್ಡದಾಗಿ ಬೆಳೆಯುವುದಕ್ಕೆ ಸಾಧ್ಯವಾಗಲಿಲ್ಲ. 

                                               
                                               

 

ಎಂಟ್ರಿ ಫಾರ್ share market: 

ಒಂದು ದಿನ ಷೇರು ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಲು ನಿರ್ಧರಿಸಿದ್ದರು, ಈ ಒಂದು ಸಮಯದಲ್ಲಿ ಬಿಎಸ್ಸಿಯಲ್ಲಿ ಟ್ರೇಡಿಂಗ್ ರಿಂಗ್ ಇತ್ತು, ಎಲೆಕ್ಟ್ರಾನಿಕ್ ಟ್ರೇಡಿಂಗ್ ಇರಲಿಲ್ಲ ಸ್ವಯಂ ಶೇರುಗಳನ್ನ ಖರೀದಿ ಮಾಡಬೇಕಿತ್ತು ಮತ್ತು ಮಾರಬೇಕಿತ್ತು ಈ ಟ್ರೇಡಿಂಗ್ ರಿಂಗ್ಅನ್ನು ಪ್ರವೇಶ ಮಾಡುವುದಕ್ಕೆ ಉದ್ಯೋಗಿಗಳು ಮತ್ತು ದಲ್ಲಾಳಿಗಳಿಗೆ ಮಾತ್ರ ಪ್ರವೇಶವಿತ್ತು ಉದ್ಯೋಗಿಗಳ ಪಾತ್ರ ತನ್ನ ಗ್ರಾಹಕರಿಗಾಗಿ ಶೇರುಗಳನ್ನು ಖರೀದಿಸುವುದು ಮತ್ತು ಮಾರಾಟ  ಮಾಡುವುದಾಗಿತ್ತು ಅಲ್ಲಿ ಟ್ರೇಡಿಂಗ್ ನಡೆಯುತ್ತಿರುವುದನ್ನು ಕಂಡು ಹರ್ಷದ್ ಮೆಹತಾರವರು  ತಾನು ಸಹ ಈರಿಂಗೆ ಎಂಟ್ರಿಕೊಟ್ಟು ಡೀಲ್ಗಳನ್ನು ಮಾಡಬೇಕೆಂದು ನಿರ್ಧರಿಸಿದ್ದರು. ಆದರೆ ಇದಕ್ಕಾಗಿ ಅವನು ಉದ್ಯೋಗಿಯಾಗುವುದು ಅನಿವಾರ್ಯವಾಗಿತ್ತು ಅದಕ್ಕಾಗಿ ಇವರು ಪಿ ಅಂಬಾಲಾಲ್  ಎಂಬ ಬ್ರೋಕರ್  ಬಳಿ ಹೋಗಿ ತನ್ನನ್ನು ಉದ್ಯೋಗಿಯಾಗಿ ಸೇರಿಸಿಕೊಳ್ಳಲು ವಿನಂತಿಸಿಕೊಂಡರು, ಸಾಕಷ್ಟು ಪ್ರಯತ್ನದ ಬಳಿಕ ಅವರಿಗೆ ಜಾಬರ್ ಬ್ಯಾಡ್ಜ್ ಸಿಕ್ಕಿತು  ಆದರೆ ಉದ್ಯೋಗಿಯಾದ ಅವರ ಮೊದಲನೇ ದಿನ ತುಂಬಾ ಕೆಟ್ಟದಾಗಿತ್ತು ಆಗಿನ ಕಾಲದಲ್ಲಿ ಒಂದೇ ಸಲ ಸುಮಾರು 2000 ಲಾಸ್  ಆಯ್ತು ಆದರೆ ಇದರಿಂದ ಹೊರ ದುಃಖ ಪಡದೆ ಇದನ್ನು ಒಂದು ಪಾಠವಾಗಿ ಸ್ವೀಕರಿಸಿದರು. ಮುಂದಿನ ಕೆಲವೇ ತಿಂಗಳ ಬಳಿಯವರು ತಮ್ಮ ಕೌಶಲ್ಯಗಳ ಮೂಲಕ ಮಾರುಕಟ್ಟೆಯಲ್ಲಿ ತ್ವರಿತವಾಗಿ ಅತ್ಯಂತ ಎಕ್ಸ್ಪರ್ಟ್ ಉದ್ಯೋಗಿಯಾದರು. ಆದರೆ ಆಗಿನ ಕಾಲದಲ್ಲಿ ಸ್ಟಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಲಾಭಗಳಿಸುವದಕ್ಕೆ ಕಂಪನಿಯ ಬಗ್ಗೆ ಅನೇಕ ಮಾಹಿತಿಯ ಅಗತ್ಯವಿರುತ್ತಿತ್ತು ಇದು ಬೇರೆಯವರಿಗಿಂತ ಮೊದಲು ತಮಗೆ ತಿಳಿಯಬೇಕೆಂದು ಹರ್ಷದ್ ಮೆಹತಾ ರವರು ಯೋಚಿಸಿದ್ದರು ಕಂಪನಿಯ ಆಂತರಿಕ ಮಾಹಿತಿಯನ್ನು ಕೊಡಬಹುದಾದ ಜನರೊಂದಿಗೆ ಸಂಪರ್ಕವನ್ನು ಬೆಳೆಸುವುದಕ್ಕೆ ಶುರು ಮಾಡಿದರು ಜೊತೆಗೆ ಕಾರ್ಮಿಕ ಒಕ್ಕೂಟ ನಾಯಕರೊಂದಿಗೆ  ಸಂಪರ್ಕ ಸಾಧಿಸಿದ್ದರು ಅವರಿಂದ ಕಂಪನಿಯ ಪ್ರೊಡಕ್ಷನ್ ಡೇಟಾವನ್ನು ಪಡೆಯುತ್ತಿದ್ದರು.

                                                       


Share buying and trading:
   ಉತ್ಪಾದನೆ ಹೆಚ್ಚಾದ ಸಮಯದಲ್ಲಿ ಕಂಪನಿಯ ಶೇರುಗಳನ್ನು ಖರೀದಿಸಬಹುದು ಮತ್ತು ಕಡಿಮೆಯಾದಂತಹ ಸಂದರ್ಭದಲ್ಲಿ ಮತ್ತು ಕಾರ್ಮಿಕರ ಮುಷ್ಕರ ಶುರುವಾಗುವಂತಹ ಸಮಯವಿದ್ದರೆ ಮಾರುವಂತ ಯೋಜನೆ ಹಾಕಿಕೊಂಡು ಇದರಲ್ಲಿ ಸಾಕಷ್ಟು ಯಶಸ್ವಿಯಾದರು. ಇದನ್ನು ಆ ಸಮಯದಲ್ಲಿ ಇಂಟರ್ನಲ್ ಟ್ರೇಡಿಂಗ್ ಎಂದು ಕರೆಯುತ್ತಿದ್ದರು, ಪ್ರಸ್ತುತ ಇದು ಕಾನೂನುಬಾಹಿರವಾಗಿದೆ ಆದರೆ ಆಗಿನ ಕಾಲದಲ್ಲಿ ಇದು ಕಾನೂನು ಬದ್ಧವಾಗಿತ್ತು. ನಂತರ ಉದ್ಯೋಗಿಯಾದಂತಹ ಇವರಿಗೆ ಇತರರಿಗೆ ಟ್ರೇಡಿಂಗ್ ಮಾಡುವುದು ಅಲ್ಲದೆ ತನ್ನ ಸ್ವಂತ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರು. 1982ರ ಹೊತ್ತಿಗೆ ಇಂಟರ್ನಲ್ ಟ್ರೇಡಿಂಗ್ ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಸಿದ್ದರು ನಂತರ ಅವರು ದೊಡ್ಡ ಮನೆಗೆ ಶಿಫ್ಟ್ ಆದರು. ಇದರಲ್ಲೇ ಅವರು ಸಾಕಷ್ಟು ಮಟ್ಟಿನ ಹಣವನ್ನು ಗಳಿಸಿದ್ದರು ಮುಂದೆ ಅವರು ತಮ್ಮ ದಾರಿ ಬದಲಾಯಿಸುವ ನಿರ್ಧಾರವನ್ನು ಮಾಡುತ್ತಾರೆ.

                                            

Pump and dump treding :
     ನಂತರ ಇಂಟರ್ನಲ್ ಟ್ರೇಡಿಂಗ್ ಹೊರತಾಗಿ pump ಅಂಡ್ dump ಎಂಬ ಇನ್ನೊಂದು ತಂತ್ರವನ್ನು ಬಳಸಲು ನಿರ್ಧರಿಸುತ್ತಾರೆ ಇದರಲ್ಲಿ ಹೆಚ್ಚು ಖರೀದಿ ಮತ್ತು ಮಾರಾಟವಾಗದ ಅಂತಹ ಸ್ಟಾಕ್ ಗಳನ್ನು ಗುರುತಿಸಿ ತಾನು ಮತ್ತು ತಮ್ಮ ಸ್ನೇಹಿತರ ಜೊತೆ ಭಾರಿ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರು ಆಗ ಆ ಷೇರುಗಳು ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತಿದ್ದವು ಆದರೆ ಬೇಡಿಕೆ ಹೆಚ್ಚಾಗುತ್ತಿತ್ತು ಈ ರೀತಿಯಾದಾಗ ಹರ್ಷತ್ ತಮ್ಮಲ್ಲಿರುವ ಶೇರುಗಳನ್ನ ಇಷ್ಟಿಷ್ಟೇ ಪ್ರಮಾಣದಲ್ಲಿ ಮಾರಾಟ ಮಾಡಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದರು. ಹರ್ಷತ್ ತಮ್ಮ ತಮ್ಮ ಈ ಹೊಸ ತಂತ್ರಗಳಿಂದಾಗಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದರು ಈಗ ಮಾರುಕಟ್ಟೆಯಲ್ಲಿ ಅವನನ್ನು ಸೋಲಿಸಲು ಯಾರಿಂದಲೂ  ಸಾಧ್ಯವಿಲ್ಲವೆಂಬಷ್ಟು ಮಟ್ಟಿಗೆ ಅವರು ಬೆಳೆದಿದ್ದರು. ಆದರೆ ಎಷ್ಟೇ ಎತ್ತರ ಬೆಳೆದರು ಸಂಭವಿಸಬಾರದು ಸಂಭವಿಸಿತ್ತು ಅದು ಹರ್ಷದ್ ಮೆಹತಾರವರನ್ನು ಸಂಪೂರ್ಣವಾಗಿ ಹಾಳುಮಾಡಿತ್ತು.
      
                                                       


 BLACK THURSDAY  :              

  1982 ಮಾರ್ಚ್ 18 ರಂದು ಸ್ಟಾಕ್ ಮಾರುಕಟ್ಟೆ ಎಂದಿನಂತೆ  ಶುರುವಾಗಿತ್ತು ಆದರೆ ನಂತರ ಎರಡು ಗಂಟೆ ಮಾರುಕಟ್ಟೆ ವೇಗವಾಗಿ ಕುಸಿಯಲು ಶುರುವಾಯಿತು ಭಾರಿ ಕುಸಿತವನ್ನು ನೋಡಿ ಎಲ್ಲರೂ ಭಯಗೊಂಡು ತಮ್ಮ ಷೇರುಗಳನ್ನು ಮಾರಲು ಶುರು ಮಾಡಿದರು ಅದು ಎಷ್ಟರಮಟ್ಟಿಗೆ  ಇತ್ತೆಂದರೆ ಕೇವಲ 15 ನಿಮಿಷದಲ್ಲಿ ಮಾರುಕಟ್ಟೆ ಅತ್ಯಂತ ಶತವೇಗದ ಕುಸಿತವನ್ನು ಕಂಡಿತು. 10 ಲಕ್ಷದ ನಷ್ಟದೊಂದಿಗೆ ಹರ್ಷದ್ ಬಹುತೇಕ ಬರ್ಬರಾಗಿದ್ದರು ಬ್ರೋಕರ್ಗಳ ದುಡ್ಡುಗಳನ್ನು ಮರುಪಾವಹಿಸಲು ಅವರು ತಮ್ಮ ಹೆಂಡತಿಯ ಒಡವೆಗಳನ್ನು ಅಡವಿಡಬೇಕಾದ ಪರಿಸ್ಥಿತಿ ಬಂದಿತು. ಮುಂದಿನ ಕೆಲ ತಿಂಗಳುಗಳ ಕಾಲ ಬ್ಯೂಟಿಷಿಯನ್ ಆಗಿದ್ದಂತಹ ಅಶ್ವಿನ್ ರವರ ಪತ್ನಿ ಮನೆ ನಡಿಸಬೇಕಾದ ಪರಿಸ್ಥಿತಿ ಬಂದಿತು. ಮುಂದೆ 1982  ಜೂನ್ ನಲ್ಲಿ ಹರ್ಷದ್ ಮತ್ತು ಅಶ್ವಿನ್ ಶೇರು ಮಾರುಕಟ್ಟೆಗೆ ಮರು ಪ್ರವೇಶವನ್ನು ಮಾಡಿದರು ಈ ಬಾರಿ ಅವರು ತಮ್ಮದೇ ಆದ ಸ್ಟಾಕ್ಸ್ ಟ್ರೇಡಿಂಗ್ ಸಂಸ್ಥೆಯನ್ನು ತೆರೆಯುವುದು ಮತ್ತು ಜನಗಳಿಗೆ ಸಲಹೆಗಳನ್ನು ಕೊಡುವಂತಹ ಯೋಜನೆಗಳನ್ನು ಹಾಕಿಕೊಂಡರು.

                                         

   
GROWMORE COMPANY INSTALLATION:                                      
 Grow more ಉದ್ದೇಶ ಶ್ರೀಮಂತ ಜನರಿಗೆ ಪೋರ್ಟ್ಪೋಲಿಯ ನಿರ್ವಹಣೆ ಸೇವೆಯನ್ನು ಒದಗಿಸುವುದು ಮತ್ತು ಅವರ ಹೆಚ್ಚುವರಿ ಹಣವನ್ನು ಮಾರಿಕಟ್ಟೆಯಲ್ಲಿ ಹೂಡಿಕೆಮಾಡಿ ಹೆಚ್ಚಿನ ರಿಟರ್ನ್ಸ್ ತಂದುಕೊಡುವುದು ಆಗಿತ್ತು. ಅಶ್ವಿನ್ ಅವರ ಮಾವ ಅವರಿಗೆ ನಾಲ್ಕು ಲಕ್ಷ ರೂಪಾಯಿಯನ್ನು ಕೊಟ್ಟಿದ್ದರು ಮತ್ತು ಇನ್ನು ಓರ್ವ ಸಿಎ ಅವರಿಗೆ ಒಂದು ಲಕ್ಷ ರೂಪಾಯಿಯನ್ನು ಕೊಟ್ಟಿದ್ದರು ಇದರಿಂದಲೇ ಈ ಗ್ರೋ ಮೋರ್ನ ವ್ಯವಹಾರ ಪ್ರಾರಂಭವಾಯಿತು. ಮಾರುಕಟ್ಟೆಯಲ್ಲಿ ಚಹಾ ಎಲೆಗಳ ದರ ಕೇಜಿಗೆ ಮೂರರಿಂದ ನಾಲ್ಕು ರೂಪಾಯಿ ಹೆಚ್ಚಾಗಿರುವುದನ್ನು ಹರ್ಷದ್ ಗಮನಿಸುತ್ತಾರೆ ಇದರ ಅರ್ಥ ಎಲೆಗಳನ್ನು ಮಾರಾಟ ಮಾಡುವ ಕಂಪನಿಗಳು ಸಾಮಾನ್ಯಕ್ಕಿಂತ ಹೆಚ್ಚು ಲಾಭವನ್ನು ಗಳಿಸುತ್ತವೆ ಎಂದು ಅವರಿಗೆ ತಿಳಿಯಿತು ಆದರೆ ಚಹಾ ಎಲೆಗಳ ಕಂಪನಿಗಳ ಷೇರುಗಳು ಸಾಕಷ್ಟು ಕಡಿಮೆ ಮೌಲ್ಯವನ್ನು ಹೊಂದಿದ್ದವು ಆಗ ಹರ್ಷದ್ ತನ್ನ ಗ್ರಾಹಕರಿಗಾಗಿ ಟಾಟಾ ಟೀ ಮತ್ತು ಹ್ಯಾರಿಸ್ ಮಲಿಯಾಂಡಂ  ನಂತಹ ಕಂಪನಿಗಳ ಶೇರುಗಳನ್ನ ಹೆಚ್ಚು ಖರೀದಿಸಲು ಪ್ರಾರಂಭಿಸಿದ್ದರು, ವರ್ಷ ಕಳೆಯುವುದರಲ್ಲಿ ಈ ಕಂಪನಿಗಳ ಷೇರುಗಳು ವೇಗವಾಗಿ ಹೆಚ್ಚಾಗ ತೊಡಗಿದವು ಇದರಿಂದಾಗಿ ಹರ್ಷದ್ ಮತ್ತು ಗ್ರೋಮೊರ್ನ ಗ್ರಾಹಕರು ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಹೈ ರಿಟರ್ನ್ಸ್ ಇಂದಾಗಿ ಈ ಗ್ರೂಮೊರ್ನ ಹೆಸರು ಎಲ್ಲಾ ಕಡೆ ವ್ಯಾಪಕವಾಗಲು ಪ್ರಾರಂಭಿಸಿತು ಗ್ರೋಮೊರ್ ನಲ್ಲಿ ಹೂಡಿಕೆ ಮಾಡಲು ಜನರು ಸಾಲುಗಟ್ಟಲೆ ನಿಲ್ಲುತ್ತಾರೆ. 1985ರ ಹೊತ್ತಿಗೆ ಹರ್ಷದ್ ಮೇಹತ ಷೇರು ಮಾರುಕಟ್ಟೆಯ ಮಾಂತ್ರಿಕ ಆಗಿದ್ದ ಆದರೆ ಇವರ ಈ ಯಶಸ್ಸನ್ನು ನೋಡಿ ಹಳೆಯ ಮಾರುಕಟ್ಟೆಯ ಕಿಂಗ್ ಒಬ್ಬರಿಗೆ ಅಸಮಾಧಾನವಾಗುತ್ತದೆ ಅವರೇ (ಮನು ಮಾಣಿಕ್) ಷೇರುಮಾರುಕಟ್ಟೆಯ ಭಾಷೆಯಲ್ಲಿ ಮನುಮಾಣಿಕ್ ಬಿಯರಾಗಿದ್ದರು ಇವರು ಶಾರ್ಪ್ ಟ್ರೇಡಿಂಗ್ ನ ಮೂಲಕ ಹಣವನ್ನುಗಳಿಸುತ್ತಿದ್ದರು. ಹರ್ಷದ್ ಮೆತಾರನ್ನು ತುಳಿಯಲು ಮನುಮಾಣಿಕ್ ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು ಆ ಒಂದು ಅವಕಾಶ ಅವರಿಗೆ 1986ರಲ್ಲಿ ದೊರೆಯಿತು, 
                                   

ಆಗಿನ ಹಣಕಾಸು ಸಚಿವರಾಗಿದಂತಹ ವಿಪಿ ಸಿಂಗ್ ಅವರು ಬಜೆಟ್ ನಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಅವು ಬಿಸಿನೆಸ್ಗಳಿಗೆ ಸರಿ ಹೊಂದುತ್ತಿರಲಿಲ್ಲ ಆಗ ಷೇರು ಮಾರುಕಟ್ಟೆ ಕುಸಿಯಲು ಪ್ರಾರಂಭವಾಯಿತು. ಹರ್ಷದ್ ಮೆಹತ SPIC ಎಂಬ ಹೆಸರಿನ ಷೇರುಗಳನ್ನು ಬಾರಿ ಪ್ರಮಾಣದಲ್ಲಿ  ಖರೀದಿಸಿದ್ದರು ಅದರ ಬೆಲೆ ಅತ್ಯಂತ ವೇಗವಾಗಿ ಕುಸಿಯುತ್ತಿತ್ತು, ಆಗ ಮನುಮಾಣಿಕ್ ಮತ್ತು ಅವರ ತಂಡ SPIC ಷೇರುಗಳನ್ನು ಬಾರಿ ಪ್ರಮಾಣದಲ್ಲಿ ಮಾರಾಟ ಮಾಡಿದರು ಆಗ ಬೆಲೆ ಮತ್ತಷ್ಟು ಕುಸಿಯತೊಡಯಿತು ಆ ಒಂದು ಸಮಯದಲ್ಲಿ ಹರ್ಷತ್ ಸಾಲವನ್ನು ಪಡೆದು SPIC ಷೇರುಗಳಲ್ಲಿ ಹೂಡಿಕೆ ಮಾಡಿದ್ದರು ಹೀಗಾಗಿ ಹರ್ಷತ್ ಮೆಹತರವರಿಗೆ ಒಂದು ಕೋಟಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಮಾಣಿಕ್ ಮತ್ತು ಅವರ ಗುಂಪು ಹಬ್ಬಿಸಿದ್ದರು, ಗ್ರೋಮೋರ್ ಸಂಸ್ಥೆ ಮಾರುಕಟ್ಟೆಯಲ್ಲಿ ದಿವಾಳಿಯಾಗಲಿದೆ ಎಂದು ಹಬ್ಬಿಸಿದರು. ಆದರೆ ವಾಸ್ತವವಾಗಿ ಅವಾಗ ಹರ್ಷತ್ ಬಳಿ  ಕಂಬ್ಯಾಕ್ ಮಾಡಲು ಸಾಕಷ್ಟು ಹಣವಿತ್ತು ಆಗ ಹರ್ಷತ್ ತನ್ನ ಮತ್ತು ಗ್ರೋಮೋರ್ ನ ರೆಪಿಟೇಶನ್ ಉಳಿಸುವುದಕ್ಕೆ ಏನಾದರೂ ಮಾಡುವುದು ಅನಿವಾರ್ಯವಾಗಿತ್ತು ಬಾಕಿ ಹಣವನ್ನು ಪಾವತಿಸಲು ಕೇವಲ 14 ದಿನಗಳ ಕಾಲ ಕಾಲಾವಕಾಶವಿತ್ತು ಆದರೆ ಆ ವದಂತೆಗೆ ಇವರು   ಕೌಂಟರ್ ಅನ್ನು ಕೊಡುವುದಕ್ಕೆ ಕಾಲಾವಕಾಶದ ಮುಂಚೆಯೇ ಹಣವನ್ನು ಪಾವತಿ ಮಾಡಿದ್ದರು ಈ ವಿಷಯವನ್ನು ಇವರು ಟೀ ಸ್ಟಾಲ್ ನಿಂದ ಹಿಡಿದು ಟ್ರೇಡಿಂಗ್ ವರೆಗೂ ಎಲ್ಲಾ ಕಡೆಯೂ ತಲುಪುವಂತೆ ಪ್ರಚಾರ ಮಾಡಿದ್ದರು. ಇದರಿಂದ ಇವರ ಖ್ಯಾತಿ ಮತ್ತಷ್ಟು ಹೆಚ್ಚಿತು ಆಗ ಈ ಮನುಮಾಣಿಕ್ ತಂಡಕ್ಕೆ ಆಘಾತವಾಗಿತ್ತು ಆದರೆ ಈ ಘಟನೆಯಲ್ಲಿ ಹರ್ಷತ್ರವರಿಗೆ ಸುಮಾರು ಒಂದುವರೆ ಕೋಟಿ ನಷ್ಟವಾಗಿತ್ತು. ಈ ಗ್ರೋ ಮೋರ್ ಸಣ್ಣ ಹೂಡಿಕೆದಾರರು ಮತ್ತು ಇನ್ಸ್ಟಿಟ್ಯೂಷನ್ ಇನ್ವೆಸ್ಟರ್ಸ್ ಗೆ ಹೂಡಿಕೆ ಮಾಡಲು ಕೆಲಸ ಮಾಡುತ್ತಿತ್ತು ಶೀಘ್ರದಲ್ಲೇ ಈ ಗ್ರೋ ಮೋರ್ ಭಾರತದ ಇನ್ಸ್ಟ್ಯೂಷನ್ಗಳಲ್ಲಿ ಒಂದಾಯಿತು. 

                                                      

SELF INVESTING :

 ಇತರರ ಹಣವನ್ನು ಹೂಡಿಕೆ ಮಾಡುವ ಬದಲು ಅವರಿಗೆ ತಮ್ಮ ಸ್ವಂತ ಹಣವನ್ನೇ ಹೂಡಿಕೆ ಮಾಡುವ ಆಸಕ್ತಿಯನ್ನು ಹೊಂದಿದ್ದರು ಹಣ ಮತ್ತು ಲಾಭ ಎರಡು ತಮ್ಮದೇ ಆಗಬೇಕೆಂದು ಬಯಸಿದ್ದರು ಆದರೆ ಇದಕ್ಕಾಗಿ ಅವರು ನೂರಾರು ಕೋಟಿಯ ಮೌಲ್ಯದ ಹಣವನ್ನು ಬಂಡವಾಳವಾಗಿ ಹಾಕಬೇಕಿತ್ತು ಆದರೆ ಇಷ್ಟೊಂದು ಹಣ ಅವರ ಬಳಿ ಇರಲಿಲ್ಲ ಇದಕ್ಕಾಗಿ ಹರ್ಷತ್ ರವರು ಹೊಸ ಮಾರುಕಟ್ಟೆಯನ್ನೆ ಪ್ರವೇಶ ಮಾಡಿದರು ಅದೇ THE MONEY MARKET  ಇದು ಬ್ಯಾಂಕ್ ನಿಂದ ಬ್ಯಾಂಕಿಗೆ ಸಾಲ ಕೊಡುವ ಪ್ರಕ್ರಿಯೆಯಾಗಿದೆ ಇದರ ಸಾಲದ ಮರುಪಾವತಿಯ ಕಾಲಾವಧಿ ಕೇವಲ 15 ದಿನಗಳು  ಮಾತ್ರ ಇದರಿಂದ ಅವರು ಬಡ್ಡಿಯ ರೂಪದಲ್ಲಿ ಹೆಚ್ಚುವರಿ ಹಣವನ್ನುಗಳಿಸಬಹುದಿತ್ತು, ಈ ಸಾಲವನ್ನು ಬ್ಯಾಂಕ್ ಗಳು ಎಮರ್ಜೆನ್ಸಿ ಸಂದರ್ಭದಲ್ಲಿ  ತೆಗೆದುಕೊಳ್ಳುತ್ತವೆ. ಈ ಸಮಯದಲ್ಲಿ ಬ್ಯಾಂಕುಗಳು ತಮ್ಮ ಬಳಿ ಇರುವ ಆಸ್ತಿಗಳನ್ನು ಅಡವಿಡಬೇಕಿತ್ತು ಆದರೆ ಈ ದಾರಿಯನ್ನು ಸುಲಭ ಮತ್ತು ಸುಗಮಗೊಳಿಸಲು ಬಿಯರ್ ಗಳನ್ನು ಬಳಸಲು ಶುರು ಮಾಡಿದರು (BR= BNAK RECIPTS ) ಎರಡು ಬ್ಯಾಂಕುಗಳ ಈ ಸಂಪೂರ್ಣ ವಹಿವಾಟನ್ನು RFD (READY FOR DEAL) ಎಂದು ಕರೆಯಲಾಗುತ್ತದೆ. ಇದನ್ನು ಮನಿಮಾರ್ಕೆಟ್ ನ ಬ್ರೋಕರ್ ಗಳು ಮ್ಯಾನೇಜ್ ಮಾಡುತ್ತಿದ್ದರು ಯಾವ ಬ್ಯಾಂಕುಗಳಿಗೆ ಇದರ ಅಗತ್ಯ ಇದೆ ಎಂದು ಹುಡುಕಿ ಅದನ್ನು ಕೊಡಿಸಿ ಅದರಿಂದ ಇವರು ಕಮಿಷನ್ಅನ್ನು ಪಡೆಯುತ್ತಿದ್ದರು ಹರ್ಷತ್ ಮೆಹತಾ ಇದರ ಬ್ರೋಕರಾಗಲು ಬಯಸಿದ್ದರು ಆದರೆ ಅಲ್ಲಿ ಹೊಸಬರಿಗೆ ಅವಕಾಶವಿಲ್ಲದಿರುವುದರಿಂದ ಇವರಿಗೆ ಅವಕಾಶ ಸಿಗಲಿಲ್ಲ ಇದರಿಂದ ಹರ್ಷತ್ ಮೇಹತ ಅವರು ಈ ಮೊದಲೇ ಅಲ್ಲಿ ಕೆಲಸ ಮಾಡಿ ಅಸಮಾಧಾನ ಹೊಂದಿರುವವರನ್ನು ಸೇರಿಸಿ ತಮ್ಮದೇ ಆದ ಒಂದು  ಹೊಸದಾದ ಕಾಟೇಲನ್ನು ರಚಿಸಿಕೊಂಡರು.

BANK OF AMERICA ಮತ್ತು ANZ GRINDLACE ಬ್ಯಾಂಕ್ಗಳನ್ನು ಹರ್ಷತ್ ಗುರುತಿಸಿದರು ಅವರಿಗೆ ತಮ್ಮ ಬ್ರೋಕಿಂಗ್ ಸೇವೆಗಳನ್ನು ಕೊಡಲು ಪ್ರಾರಂಭಿಸಿದರು ಕೇವಲ ಎರಡು ವರ್ಷದಲ್ಲಿ ಮನಿ ಮಾರ್ಕೆಟಿಂಗ್ ಒಬ್ಬ ಉತ್ತಮ ಟಾಪ್ ಬ್ರೋಕರ್ ಆಗಿ ಗುರುತಿಸಿಕೊಂಡರು ಮತ್ತು ಇದರಲ್ಲಿ ಸಾಕಷ್ಟು ಹಣವನ್ನುಗಳಿಸಿದ್ದರು. ಆದರೆ ಈ ಹರ್ಷತ್ರವರು ಮನಿ ಮಾರ್ಕೆಟ್ ನಲ್ಲಿ ಬ್ರೋಕರ್ ಆಗಿ ಹಣಗಳಿಸಲು  ಬಂದಿರಲಿಲ್ಲ ಮನಿ ಮಾರ್ಕೆಟಿಂಗ್ ಅನ್ನು ಬಳಸಿಕೊಂಡು ಷೇರು ಮಾರ್ಕೆಟ್ನಲ್ಲಿ ಸಾವಿರಾರು ಕೋಟಿಗೊಳಿಸುವ ಯೋಜನೆ ಅವರದಾಗಿತ್ತು. 
      
                                            

   SCAM 1992 :
   ಆದರೆ ಅವರ ಈ ಯೋಜನೆಯ ಮುಂದೆ ಭಾರತದ ಅತೀ ದೊಡ್ಡ ಹಣಕಾಸು ಒಗ್ಗರಣೆಯನ್ನು ಪಡೆಯಲ್ಲಿತ್ತು ಮೈ ಮಾರ್ಕೆಟ್ ನಲ್ಲಿ ಸಮಯವನ್ನು ಉಳಿಸಲು ಅನೇಕ ಬ್ಯಾಂಕ್ಗಳು ಮುಂಚಿತವಾಗಿಯೇ ಬ್ರೋಕರ್ ಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದವು ಬ್ರೋಕರ್ಗಳಿಗೆ ಒಳ್ಳೆ ಡೀಲ್ ಸಿಕ್ಕಾಗ ಅವರು ಅವುಗಳನ್ನು ಅವಶ್ಯಕತೆ ಇರುವಂತಹ ಬ್ಯಾಂಕಗಳಿಗೆ ತಕ್ಷಣ ವರ್ಗಾಯಿಸಿ ಅವರಿಂದ ಬಿಆರ್ ಪಡೆದು ಸಾಲ ಕೊಟ್ಟಂತಹ ಬ್ಯಾಂಕ್ಗಳಿಗೆ ವರ್ಗಾಯಿಸಬೇಕಿತ್ತು ಹಾಗೆ ವರ್ಗಾವಣೆ ಮಾಡಿದಂತಹ ಹಣ ಕೆಲವೊಮ್ಮೆ 15 -20 ದಿನಗಳವರೆಗೆ ಬ್ರೋಕರ್ ಗಳ ಬಳಿಯೇ ಇರುತ್ತಿತ್ತು, ಇಲ್ಲಿನ ಈ ಲೂಫೋನ್ಸ್ ಕಂಡುಕೊಂಡಂತಹ ಹರ್ಷತ್ ಮೆಹತಾ ಬ್ಯಾಂಕುಗಳು ಅವನಿಗೆ ಹಣವನ್ನು ವರ್ಗಾಯಿಸಿದಾಗ ಆ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಇವರು ಹೂಡಿಕೆ ಮಾಡಲು ಶುರು ಮಾಡಿದ್ದರು. ತನ್ನ ನೆಚ್ಚಿನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಗೆ ಮಾಡಿ ಯಾವುದಾದರೂ ಬ್ಯಾಂಕುಗಳಿಗೆ ಸಾಲಬೇಕೆಂದಾಗ ಅವುಗಳನ್ನ ಮಾರಿ  ಅವುಗಳಿಗೆ ಹಣ ಕೊಟ್ಟು ಅವುಗಳಿಂದ ಬಿಆರ್ ಪಡೆದು ಅವುಗಳನ್ನು ಮೂಲ ಬ್ಯಾಂಕ್ ಕೊಡುತ್ತಿದ್ದರು ಇಲ್ಲಿ ಷೇರು ಮಾರುಕಟ್ಟೆಯಲ್ಲಿ ಬಂದಂತಹ ಲಾಭ ಹಾಗೂ ಬ್ಯಾಂಕಿನಿಂದ ಬರುತ್ತಿದ್ದಂತಹ ಕಮಿಷನ್ ಹೀಗೆ ಎರಡೆರಡು ಕಡೆ ಆದಾಯವನ್ನು ಯಾರದೋ ದುಡ್ಡಿಂದ ಪಡೆಯುತ್ತಿದ್ದರು. ಇಷ್ಟಕ್ಕೂ ಸಮಾಧಾನವಾಗದಂತಹ ಅವರು ಈ ವ್ಯವಹಾರದಲ್ಲಿ ಮತ್ತೊಂದು ಲೂಪ್ ಹೋಲ್ ಅನ್ನು ಕಂಡುಕೊಂಡಿದ್ದರು ಅದೇನೆಂದರೆ ಸಾಲಕ್ಕೆ ಕೊಡುತ್ತಿದ್ದಂತಹ ಬಿಆರ್‌ಗಳನ್ನು ಯಾರು ಕ್ರಾಸ್ ಚೆಕ್ ಮಾಡುತ್ತಿರಲಿಲ್ಲ ಇದರ ಅರ್ಥ ಬಿಆರ್ ನಲ್ಲಿ ಹೇಳಿದ ಹಾಗೆ ಸೆಕ್ಯೂರಿಟೀಸ್ ಅಷ್ಟೊಂದು ಆಸ್ತಿ ನಿಜವಾಗಿಯೂ ಆ ಬ್ಯಾಂಕ್ಗಳ ಬಳಿ ಇದೆ ಎಂದು ಯಾರೂ ಸಹ ನೋಡುತ್ತಿರಲಿಲ್ಲ ಇದರ ಲಾಭವನ್ನು ಪಡೆಯಲು ಯೋಜನೆ ಮಾಡಿದಂತಹ ಹರ್ಷತ್ ಸಣ್ಣಪುಟ್ಟ ಬ್ಯಾಂಕ್ಗಳಿಗೆ ನೂರಾರು ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಆ ಬ್ಯಾಂಕ್ಗಳು ಹೇಳಿದ ಹಾಗೆ ಒಂದು ನಕಲಿ ಬಿ ಆರ್ ಅನ್ನು ಕೊಡುತ್ತಿದ್ದರು ಹೀಗಿರುವಾಗ ಅವರಿಗೆ ಮಾರುಕಟ್ಟೆಯಲ್ಲಿ ಷೇರುಗಳನ್ನು ಕೊಳ್ಳಲು ಮತ್ತು ಪೇರನ್ನು ಮಾರಲು ಹೆಚ್ಚು ಸಮಯ ಸಿಗುತ್ತಿತ್ತು ಹೀಗಾಗಿ ಅದರಿಂದ ಭರ್ಜರಿ ಲಾಭವನ್ನುಗಳಿಸಿದ್ದರು.ಇದರಿಂದ ಇವರಿಗೆ ಮಾರುಕಟ್ಟೆಯಲ್ಲಿ " THE BIG BULL" ಎಂಬ ಹೆಸರು ಸಹ ಬಂದಿತ್ತು. ಮಾರುಕಟ್ಟೆಯಲ್ಲಿ ಹರ್ಷತ್ ಮೈದಾರ್ ಅವರ ಪ್ರಭಾವ ಇಷ್ಟರಮಟ್ಟಿಗೆ ಇತ್ತು ಎಂದರೆ ಅವರು ಕೈ ಹಾಕಿದಂತಹ ಷೇರುಗಳ ಬೆಲೆ ದಿನ ಕಳೆಯುವುದರಲ್ಲಿ ಏರುತ್ತಿದ್ದವು ಆದ್ರೆ ಇವರ ಪ್ರಭಾವ ಎಷ್ಟು ಬೇಗ ಏರಿತ್ತು ಅಷ್ಟೇ ಬೇಗನೆ ಇಳಿಯಿತು. 
                                                       


     1991ರಲ್ಲಿ ಮನಿ ಮಾರ್ಕೆಟ್ ನಲ್ಲಿ  ನಕಲಿ ಬಿ ಆರ್ ಗಳು ಎಂಬ ಸುಳಿವು RBI ಕೈಗೆ ಸಿಕ್ಕಿತು ಅವುಗಳ ದುರುಪಯೋಗ ಆಗುತ್ತಿರುವುದು ಸಹ ಆರ್‌ಬಿಐಗೆ  ಗೊತ್ತಾಯಿತು  ಆಗ ಆರ್ ಬಿ ಐ ಕೆಲ ಬ್ಯಾಂಕಗಳ ತನಿಖೆಗೆ ಆದೇಶ ಹೊರಡಿಸಿತು ಜೊತೆಗೆ ಎಲ್ಲಾ ಬ್ಯಾಂಕ್ಗಳಿಗೆ ಬಿ ಆರ್ ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದಂತಹ ಮಾರ್ಗಸೂಚಿಗಳನ್ನು ಸಹ ಕೊಟ್ಟಿತು, ಅಂದರೆ ನಕಲಿ ಬಿ ಆರ್ ಗಳನ್ನು ಬಳಸಿ ಮನಿ ಮಾರ್ಕೆಟ್ ನಲ್ಲಿ ಕಾರ್ಯನಿರ್ವಹಿಸುವುದು ತುಂಬಾ ಕಷ್ಟಕರವಾಗಿತ್ತು ಆದರೆ ಇದರ ನಂತರ ಹರ್ಷತ್ ಡಿಸೆಂಬರ್ 1991ರಲ್ಲಿ ಎಸ್ ಬಿ ಐ ನಿಂದ 500 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದರು ಈ ಹಣವನ್ನು ಷೇರುಮಾರುಕಟ್ಟೆಯಲ್ಲಿ ಹಾಕಿದ್ದರು ಆದರೆ ಬೇರೆ ಬ್ಯಾಂಕ್ಗಳಿಂದ  ಎಸ್ ಬಿ ಐ ಗೆ ನಕಲಿ ಬಿ ಆರ್ ಗಳನ್ನು ಕೊಡಲು ಸಾಧ್ಯವಾಗಲಿಲ್ಲ ಆಗ ಈ ಹರ್ಷತ್ ಎಸ್ ಬಿ ಐ ನ ಅಧಿಕಾರಿಯಾಗಿದ್ದ ಆರ್ ಸೀತಾರಾಮನ್ ಅವರಿಗೆ  ಲಂಚ ಕೊಟ್ಟು ಈ ಬಿಆರ್‌ಗಳನ್ನು ಕೊಡದಂತಹ ಸಂಗತಿಗಳನ್ನು ಗೊತ್ತಾಗದಂತೆ ನೋಡಿಕೊಳ್ಳಲು ಹೇಳಿದ್ದರು ಕೆಲವು ದಿನ ಹಿರಿಯ ಅಧಿಕಾರಿಗಳಿಗೆ ಈ ಸ್ಕ್ಯಾಮ್ ಬಗ್ಗೆ ತಿಳಿದಿರಲಿಲ್ಲ ಆದರೆ ಈ ಸ್ಕ್ಯಾನ್ ತುಂಬಾ ದಿನ ಉಳಿಯಲಿಲ್ಲ.
      
      ಏಪ್ರಿಲ್ 1992ರಲ್ಲಿ ಎಸ್ ಬಿಐನ ಅಧಿಕಾರಿಗಳು ತಮ್ಮ ದಾಖಲೆಗಳಲ್ಲಿ ಐನೂರು ಕೋಟಿ ರೂಪಾಯಿಗಳ  ಅಂತರ  ಪತ್ತೆಹಚ್ಚಿದರು ನಂತರ ಎಸ್‌ಬಿಐ  ಹರ್ಷತ್ ರವರನ್ನು ಕರೆಸಿ ಹಣವನ್ನು ಹಿಂದಿರುಗಿಸಲು ಒತ್ತಾಯಿಸುತ್ತಾರೆ ಆದರೆ ವರ್ಷಕ್ಕೆ ಈ ಒಂದು ಹಣದ ಅಗತ್ಯ ತುಂಬಾ ಇತ್ತು ಶೇರು ಮಾರುಕಟ್ಟೆಯನ್ನು ಎತ್ತರವಾಗಿ ನೋಡಿಕೊಳ್ಳಲು ಆ ಹಣ  ಬೇಕಿತ್ತು, ಹಾಗಾಗಿ ಆ ಹಣವನ್ನು ಕೊಡಲು ಆಗಲಿಲ್ಲ ಹರ್ಷತ್ ಮೆಹತ ಅವರ ತಮ್ಮ ಕೆಲವೊಂದು ಷೇರುಗಳನ್ನು ಮಾರಿ ಆ ಹಣವನ್ನು ಹಿಂದಿರುಗಿಸಲು ಹೇಳುತ್ತಾನೆ ಆದರೆ ಹರ್ಷತ್ ಇದನ್ನು ಒಪ್ಪುವುದಿಲ್ಲ ಹಣ ಕೊಡದಿದ್ದರೆ ಎಸ್‌ಬಿಐ ಕಾನೂನು ಕ್ರಮವನ್ನು ಕೈಗೊಳ್ಳುತ್ತಿತ್ತು ಇದರಿಂದ ಅವರ ಎಲ್ಲಾ ಹಗರಣ ಹೊರಬರುವಂತಿತ್ತು ಇದರಿಂದ ಎಸ್ ಬಿ ಐ ಬಳಿ ಸ್ವಲ್ಪ ಕಾಲಾವಕಾಶವನ್ನು ಕೇಳಿದ್ದರು ನಂತರ NHB ಎಂಬ ಬ್ಯಾಂಕಿನಿಂದ ಹಣವನ್ನು ಪಡೆದು ಎಸ್ ಬಿ ಐ ಗೆ ಕಂತುಗಳ ರೂಪದಲ್ಲಿ ತುಂಬುವುದಕ್ಕೆ ಶುರು ಮಾಡಿದರು ಆದರೆ ಅಷ್ಟೊತ್ತಿಗಾಗಲೇ  1992 ಏಪ್ರಿಲ್ 23 ಸುಮಾರು 500 ಕೋಟಿ ರೂಪಾಯಿ ಎಸ್ಬಿಐ ಖಾತೆಯಿಂದ ಮಿಸ್ ಆಗಿದೆ ಇದಕ್ಕೆಲ್ಲ ಕಾರಣ  ಬಿಗ್ ಬುಲ್  ಹರ್ಷತ್ ಮೆಹತ TIME OF INDIA ಮತ್ತು ಇನ್ನುಳಿದ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಿದರು, ಈ ಒಂದು ವರದಿ ಸಂಸತ್ತಿನಲ್ಲೂ ಸಹ ಗದ್ದಲವನ್ನು ಎಬ್ಬಿಸಿತು ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಧ್ವನಿಯನ್ನು ಎತ್ತಿದರು ಗಾಬರಿಯಾದಂತ ಸರ್ಕಾರ ಹರ್ಷತ್ ಮೇಲೆ ಆದಾಯ ತೆರಿಗೆ ಸಿಬಿಐ ತನಿಕೆಗೆ ಆದೇಶ ಹೊರಡಿಸಿತು ಮನಿ ಮಾರ್ಕೆಟ್ ಮತ್ತು  ಹಣದ ಹಗರಣ ಒಂದೊಂದಾಗಿ ಬೆಳಕಿಗೆ ಬರಲು ಶುರುವಾಯಿತು ಹರ್ಷತ್ ರನ್ನು ಸೇರಿದಂತೆ BANK OF KARAD ಮತ್ತು COOPERATIVE BANK ಗಳು ಸಹ ಮುಳುಗಿ ಹೋದವು ಈ ಸಂಪೂರ್ಣ ಅಗರಣದ ಗಾತ್ರ ಸುಮಾರು ನಾಲ್ಕು ಸಾವಿರ ಕೋಟಿ. 1992 ಜೂನ್ 4 ರಂದು ಹರ್ಷತ್ ಮೆಹತಾ ಮತ್ತು ಅವರ ತಮ್ಮ ಅಶ್ವಿನ್ ಮೆಹತಾರನ್ನು ಬಂಧಿಸಲಾಯಿತು ಅವರ ಆಸ್ತಿ,ಮನೆ,ಬ್ಯಾಂಕುಗಳು ಮತ್ತು ಕಾರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಯಿತು.



" ತುಂಬಾ ಜನ ಹರ್ಷತ್ ಮೆಹತಾರನ್ನು ಒಬ್ಬ ಫ್ರಾಡ್ ಎಂದು ಕರೆದರೆ ಮತ್ತು ತುಂಬಾ ಜನ ಆತ ಬುದ್ಧಿವಂತ ವ್ಯಕ್ತಿ ಎಂದು ಕರೆಯುತ್ತಾರೆ". ಇವರ ಬಗ್ಗೆ ನಿಮ್ಮ ಅಭಿಪ್ರಾಯವೇನು?
                                           

Wednesday, 18 March 2026

What if 1 rupee became a 1 dollar?

                      1$ to 1₹🤑

  ನಿಮಗಿದು ಗೊತ್ತಾ?:  

1947 ನಮ್ಮ ಭಾರತದ 1 ರೂಪಾಯಿಯ ಮೌಲ್ಯವು 1 ಡಾಲರ್ಗೆ ಸಮವಾಗಿತ್ತು ಆದರೆ ಸಮಯ ಕಳೆದಂತೆ ಈ ಪರಿಸ್ಥಿತಿ ಬದಲಾಯಿತು, 1966 ರಲ್ಲಿ 1 ಡಾಲರ್ 4.67₹ ಗೆ ಸಮನಾದರೆ ಇಂದು ನಾವು 1ಡಾಲರ್ ಪಡೆಯಲು ₹93.23 ರೂಪಾಯಿ ಕೊಡಬೇಕಾಗಿದೆ, ಹಾಗಾದರೆ  ಈ ದೊಡ್ಡ ಮೌಲ್ಯ ಏಕಾಯಿತು ರೂಪಾಯಿ ಮೌಲ್ಯ ಕುಸಿಯಲು ಕಾರಣವೇನು? ಇದು ನಿಜಕ್ಕೂ ಬ್ರಿಟಿಷರ ಆಟವಿರಬಹುದಾ? ಅಥವಾ ಬೇರೇನಾದ್ರೂ ಇದಿಯಾ?

                                 

📉

     ನಮ್ಮ 1ರೂಪಾಯಿ 1 ಡಾಲರ್ ಆದರೆ ಏನಾಗಬಹುದು? ಭಾರತದ ಪ್ರತಿಯೊಬ್ಬ ಬಡವನು ರಾತ್ರೋರಾತ್ರಿ ಶ್ರೀಮಂತ ನಾಗಿಬಿಡುತ್ತಾನೆ.ಉದಾಹರಣೆಗೆ ಇಂದು 20 ಸಾವಿರ  ಸಂಪಾದಿಸುವರ ಸಂಬಳ  16 ಲಕ್ಷ ರೂಪಾಯಿ ಆಗಿಬಿಡುತ್ತದೆ, ಲಕ್ಷಾಂತರಗಳಲ್ಲಿ ಆಟವಾಡುವ ಜನರು ಕೋಟ್ಯಂತರಗಳಲ್ಲಿ ಅಥವಾಡುತ್ತಾರೆ ಅಷ್ಟೇ ಅಲ್ಲ ಇಂದು ಪ್ರತಿ ಲೀಟರ್ 102 ₹  ರೂಪಾಯಿ ಇರುವ ಪೆಟ್ರೋಲ್ ಕೇವಲ ₹ 50 ಕ್ಕೆ ಆಗಿಬಿಡುತ್ತೆ. ಸರ್ಕಾರ ಯಾಕೆ ಒಂದು ಡಾಲರ್ ಅನ್ನು 1 ರೂಪಾಯಿ ಮಾಡುತ್ತಿಲ್ಲ  ನೋಟು ಮುದ್ರಿಸುವ ಅಧಿಕಾರ ಸರ್ಕಾರದ ಕೈಯಲ್ಲಿರುವಾಗ 1 ರೂಪಾಯಿ ಅಂದ್ರೆ 1 ಡಾಲರ್ ಮಾಡುತ್ತಿಲ್ಲ? ತಜ್ಞರ ಪ್ರಕಾರ ಕರೆನ್ಸಿ ಯ ಮೌಲ್ಯ ದೃಬಲಾವಾಗೆ ಇರುವುದು ಭಾರತಕ್ಕೆ ಹೆಚ್ಚು ಲಾಭದಾಯಕ ಕರೆನ್ಸಿ ಬದಲಾದರೆ ದೇಶ ಬದಲಾಗುತ್ತದೆ ಎನ್ನುವುದು ಸತ್ಯ ಆದರೆ ಅರ್ಥಶಾಸ್ತ್ರದಲ್ಲಿ ಇದು ಅಷ್ಟು ಸುಲಭವಲ್ಲ ಇದು ಒಂದು ವಿಚಿತ್ರವಾದ ಪ್ಯಾರಡಾಸ್ಕ್ ಆಗಿದೆ.  

                                            

       

 ದೃರ್ಬಲ ಕರೆನ್ಸಿಯಿಂದ ನಮ್ಮ ರಫ್ತುಗಳು ಹೆಚ್ಚಾಗುತ್ತವೆ, ಬೇರೆ ದೇಶಗಳಿಗೆ ಭಾರತದ ರಫ್ತುಗಳು ಅಗ್ಗವಾಗಿ ಸಿಗುವುದರಿಂದ ಅವುಗಳ ಬೆಲೆ ಹೆಚ್ಚಾಗುತ್ತದೆ ಇದರಿಂದ ನಮ್ಮ ದೇಶಕ್ಕೆ ವಿದೇಶಿ ಕರೆನ್ಸಿ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ ಉದ್ಯೋಗ ಸೃಷ್ಟಿಯಾಗುತ್ತದೆ ಜೊತೆಗೆ ಆರ್ಥಿಕತೆ ಬಲವಾಗುತ್ತದೆ ಆದರೆ ಮತ್ತೊಂದು ಹೊಸದೆಂದರೆ ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು ಉದಾಹರಣೆ : ಕಚ್ಚಾ ತೈಲ, ಎಲ್ಲಿಟ್ರಾನಿಕ್ ಉಪಕರಣಗಳು ದುಬಾರಿಯಾಗುತ್ತವೆ. ಆರ್ಥಿಕತೆಯ ರಹಸ್ಯವನ್ನು ನೋಡುವುದಾದರೆ ನಮ್ಮ ಆರ್ಥಿಕತೆಯ ಕುಸಿತಕ್ಕೆ ನಿಜವಾದ ಹೊರೆಗಾರರು ನಮ್ಮದೇ ಸರ್ಕಾರ ಹಾಗೂ ಅದರ ನೀತಿಗಳು. ಒಂದು ದೇಶದ ಕರೆನ್ಸಿಯ ಮೌಲ್ಯವು ಎರಡು ಮುಖ್ಯ ಪದ್ದತಿಯು ಮೇಲೆ ನಿರ್ಧಾವಾಗುತ್ತದೆ. 1 FIXED EXCHANGE RATE SYSTEM (ಇಲ್ಲಿ ಸರ್ಕಾರವೇ ಕರೆನ್ಸಿ ಮೌಲ್ಯವನ್ನ ನಿಗದಿ ಪಡಿಸುತ್ತದೆ), 2 FEXIBAL EXCHANCE RATE SYSTEM (ಇಲ್ಲಿ ಮಾರುಕಟ್ಟೆಯ ಬೇಡಿಕೆ, ಪೂರೈಕೆಯ ಮೇಲೆ ಕರೆನ್ಸಿಯ ಮೌಲ್ಯ ಏರಿಳಿತ ಕಾಣುತ್ತದೆ.


       1947-1966 ರ ಹೊತ್ತಿಗೆ ಭಾರತವು 1 ಡಾಲರ್ ಅಂದರೆ 4.76 ರೂಪಾಯಿ ಎಂಬ ಮೌಲ್ಯವನ್ನು ಉಳಿಸಿಕೊಂಡಿತ್ತು ಆದರೆ 1966 ರಲ್ಲಿ ಭಾರತ ಏಕಾಏಕಿ ಕರೆನ್ಸಿಯ ಮೌಲ್ಯವನ್ನು 50%ದಷ್ಟು ಇಳಿಸಿ 1 ಡಾಲರ್ ಅಂದ್ರೆ 7.50 ರೂಪಾಯಿಗೆ ತಂದಿಟ್ಟಿತು. ಇದಕ್ಕೆ ಪ್ರಮುಖ ಕಾರಣಗಳು ಆರ್ಥಿಕ ಬಿಕ್ಕಟ್ಟು ವಿದೇಶಿ ಸಾಲಗಳು ಹೆಚ್ಚಾಗಿದ್ದು ಹಾಗೂ ಆಗಿನ ಸರ್ಕಾರದ ಕೆಲವು ಆರ್ಥಿಕ ನೀತಿಗಳು. ಆರ್ಥಿಕ ನೀತಿಯನ್ನು ಸುಧಾರಿಸಲು 1993ರಲ್ಲಿ ಭಾರತವು ದೊಡ್ಡ ನಿರ್ಧಾರವನ್ನು  ತೆಗೆದುಕೊಳ್ಳುತ್ತದೆ ಅದು FLEXIBLE EXCHANGE RATE SYSTEM ಅನ್ನು ಅಳವಡಿಸಿಕೊಂಡಿತು. ಅಂದರೆ ಅಂದಿನಿಂದ ರೂಪಾಯಿಯ ಮೌಲ್ಯ ಮಾರುಕಟ್ಟೆಯ ಬೇಡಿಕೆ ಪೂರೈಕೆಯ ಮೇಲೆ ಅವಲಿಂಬಿತವಾಗಿದೆ. 1 ರೂಪಾಯಿ ಅಂದರೆ 1 ಡಾಲರ್ ಎಂದು ಕನಸು ಕಾಣುವುದು ಸುಲಭ ಆದರೆ ಅದು ವಾಸ್ತವವಾಗಿ ಆರ್ಥಿಕ ಸ್ಥಿತಿ ವಿದೇಶಿ ವೈವಾಟು ಜಾಗತಿಕ ಮಾರುಕಟ್ಟೆ ಇವೆಲ್ಲವೂ ರುಪಾಯಿಯ ಮೌಲ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಬಲವಾದ ದೇಶವೆಂದರೆ ಬಲವಾದ ಕರೆನ್ಸಿ ಇರುವ ದೇಶವೆಂದಲ್ಲ ದುರ್ಬಲ ಕರೆನ್ಸಿ ಇದ್ದರೆ ದುರ್ಬಲ ದೇಶ ಎಂಬ ಅರ್ಥವಲ್ಲ.

                                          


ಕರೆನ್ಸಿ ಎಂದರೆ ಬೇರೇನೂ ಅಲ್ಲ ಅದು ಒಂದು ಆರ್ಥಿಕ ಸಾಧನ. ಪ್ರತಿಯೊಂದು ದೇಶದ ಕೇಂದ್ರೀಯ ಬ್ಯಾಂಕ್ ಅದನ್ನು ಬಳಸುತ್ತದೆ ನಮ್ಮ ಭಾರತದಲ್ಲಿ ಅದು Reserve Bank of India ಕರೆನ್ಸಿಯು ದೇಶದ ಆರ್ಥಿಕತೆಯಲ್ಲಿ ವಿನಿಮಯ ಮಾಧ್ಯಮವಾಗಿ ಮೌಲ್ಯದ ಅಳತೆ ಗೋಲಾಗಿ ಹಾಗೂ ಸಂಪತ್ತನ್ನು ಶೇಖರಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಇದು ದೇಶದ ಆರ್ಥಿಕತೆಯನ್ನು ಸ್ಥಿರತೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆಗಳು ಆರಂಭವಾದವು ಆದರೆ 1962 ರ ಇಂಡೋ ಚೀನಾ ಯುದ್ಧ ಹಾಗೂ 1965 ರ ಇಂಡೋಪಾಕ್ ಯುದ್ಧದಂತಹ ಘಟನೆಗಳು ನಮ್ಮ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದವು ದೇಶದ ಆರ್ಥಿಕತೆ ತೀರವಾಗಿ ಹದಗೆಟ್ಟಿತು ಇದರಿಂದ ಸಾಲಗಳನ್ನು ತೀರಿಸಲು ನಮ್ಮ ದೇಶಕ್ಕೆ ವಿದೇಶಿಯ ಸಾಲದ ಅಗತ್ಯವಿತ್ತು ಆದರೆ ಆ ಸಾಲವನ್ನು ತೀರಿಸಲು ನಮ್ಮ ದೇಶದ ಬಳಿ ಸಾಕಷ್ಟು ಹಣವಿರಲಿಲ್ಲ ಈ ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿತು ರೂಪಾಯಿ ಅನ್ನು ಡಾಲರ್ ಮೌಲ್ಯಕ್ಕೆ ಇಳಿಸುವುದು 1 ರೂಪಾಯಿ ಅಂದರೆ 4.76 ಆಗಿದ್ದ ಮೌಲ್ಯವನ್ನು 1 ರೂಪಾಯಿ ಅಂದರೆ 7.50 ಗೆ ಇಳಿಸಲಾಯಿತು. ಇದರ ಹಿಂದಿನ ಉದ್ದೇಶ ವಿದೇಶಿ ಹೂಡಿಕೆಯನ್ನು ಆಕರ್ಷಣೆ ಮಾಡುವುದು ಇದರಿಂದ ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಜೊತೆಗೆ ವಿದೇಶಿ ಸಾಲಗಳನ್ನು ತೀರಿಸಲು ಅವಕಾಶ ಸಿಗುತ್ತದೆ ಆದರೆ ಇದರಿಂದ ಸಮಸ್ಯೆಗಳು ಸಂಪೂರ್ಣವಾಗಿ 
ನಿವಾರಣೆಯಾಗದಾಯಿತು.

                                       

 1991ರ ಆರ್ಥಿಕ ಬಿಕ್ಕಟ್ಟು ಭಾರತವನ್ನು ಮತ್ತೊಮ್ಮೆ ಸಂಕಷ್ಟಕ್ಕೆ ತಳ್ಳಿತು ಅಂದಿನಿಂದ ಇಂದಿನವರೆಗೂ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಲೇ ಬಂದಿದೆ, ಉದಾಹರಣೆಗೆ 2016ರಲ್ಲಿ ಭಾರತ ತನ್ನ ಡಾಲರ್ ಎದುರು ಸುಮಾರು 
 -6%  ಡಿ ವ್ಯಾಲ್ಯೂ ಮಾಡಿತ್ತು. ಮುಂದಿನ 10,20,25 ವರ್ಷದಲ್ಲಿ ಭಾರತದ ಕರೆನ್ಸಿ ಬಲವಾಗುತ್ತದೆ ಅನ್ನುವುದಕ್ಕೆ ಏನು ಗ್ಯಾರಂಟಿ ಇದೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಕರೆನ್ಸಿ ಮೌಲ್ಯ ಏರಿದರೂ ಇಳಿದರು ನಮ್ಮ ಜೀವನ ಹಣ ಸಂಪಾದನೆ ಉಳಿತಾಯ ಹಾಗೂ ನಿವೃತ್ತಿಯತ್ತ ಸಾಗುತ್ತದೆ, ಹಾಗಾಗಿ ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ಮಾಡಿಕೊಳ್ಳುವುದು ಹೇಗೆ? ಕರೆನ್ಸಿಯ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವಾಗ ಏನು ಮಾಡಬೇಕು ನಮ್ಮ ಕರೆನ್ಸಿಯ ಮೌಲ್ಯ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಕುಸಿಯುತ್ತಿದೆ  ಹಾಗಾದರೆ ಭವಿಷ್ಯದಲ್ಲಿ ಕರೆನ್ಸಿಯ ಮೌಲ್ಯ ಏರಿಕೆಯಾಗುವ ಹಾಗೂ ಬಲವಾಗುವ  ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದರೆ ಹೇಗೆ ಇದು ಒಂದು ದೊಡ್ಡ ಆರ್ಥಿಕ ತಂತ್ರ ಯಾಕೆಂದರೆ ನಮ್ಮ ಕೈಯಲ್ಲಿ ಇರುವುದು ನಗದು ವರ್ಷದಿಂದ ವರ್ಷಕ್ಕೆ ತನ್ನ ಮೌಲ್ಯವನ್ನು  ಕಳೆದುಕೊಳ್ಳುತ್ತದೆ.

                                                 

   
 ಒಂದು ವೇಳೆ ನಮ್ಮ ಸರ್ಕಾರ ಇಂದಿನ ರಾತ್ರಿಯಿಂದ ಒಂದು ರೂಪಾಯಿ ಒಂದು ಡಾಲರ್ ಗೆ ಸಮ ಎಂದು ಘೋಷಣೆ ಹೊರಡಿಸಿದರೆ ಏನಾಗಬಹುದು?  ಉದಾಹರಣೆಗೆ ₹10000 ಸಂಬಳ ಪಡೆಯುವ ವ್ಯಕ್ತಿಯ ಸಂಪಾದನೆ ₹8,30,000  ಆಗಿಬಿಡಬಹುದು. ಇದರಿಂದ ಭಾರತಕ್ಕೆ ನಿಜವಾಗಿಯೂ ಲಾಭವಾಗುತ್ತದೆಯೇ? ಅಥವಾ ಆರ್ಥಿಕ ಬಿಕ್ಕಟ್ಟನ್ನು ತರಬಹುದೇ  ?  ಒಂದು ರೂಪಾಯಿ ಒಂದು ಡಾಲರ್ ಗೆ ಸಮನಾದರೆ ದೇಶದ ಆರ್ಥಿಕತೆಯಲ್ಲಿ ಏನೆಲ್ಲ ಲಾಭ ಸಿಗಬಹುದು?         
1. ಆಮದು ಅಗ್ಗವಾಗುತ್ತದೆ  ಭಾರತ ತನ್ನ ದೇಶದ ಶೇಕಡಾ 85% ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ 2020ರಲ್ಲಿ 74 ಮಿಲಿಯನ್ ಟನ್ ಹಾಗೂ 2021 ರಲ್ಲಿ 84 ಮಿಲಿಯನ್ ಟನ್ ಆಮದು ಮಾಡಿಕೊಳ್ಳಲು ಭಾರತ ಕೋಟಿ ರೂಪಾಯಿ ಮೊತ್ತದ ಹಣವನ್ನು ಖರ್ಚು ಮಾಡಿತ್ತು,  ಉದಾಹರಣೆಗೆ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆ 100 ಡಾಲರ್ ಎಂದು ಅಂದುಕೊಂಡರೆ  ಇಂದಿನ ಪರಿಸ್ಥಿತಿಯಲ್ಲಿ ನಾವು ಅದನ್ನು ಖರೀದಿಸಲು ಸುಮಾರು ₹8700 ಕೊಡಬೇಕು ಆದರೆ ಒಂದು ರೂಪಾಯಿ ಒಂದು ಡಾಲರ್ ಗೆ ಸಮನಾದಾಗ ಅದನ್ನು ಕೇವಲ ₹100 ಕ್ಕೆ ಖರೀದಿಸಬಹುದು.
2. ಬೆಲೆಗಳು ಕಡಿಮೆಯಾಗುತ್ತವೆ ಕಚ್ಚಾಲದ  ಬೆಲೆ ಕಡಿಮೆಯಾದಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ತಕ್ಷಣವಾಗಿ ಕುಸಿಯುತ್ತವೆ ಇದರಿಂದ ಟ್ರಾನ್ಸ್ಪೋರ್ಟ್ ಖರ್ಚು ಕಡಿಮೆಯಾಗಿ ದಿನನಿತ್ಯದ ವಸ್ತುಗಳ ಬೆಲೆಯೂ ಕೂಡ ಇಳಿಯುತ್ತವೆ ಇದು ಸಾಮಾನ್ಯ ಜನರ ಬದುಕಿನ ಜೀವನಕ್ಕೆ ದೊಡ್ಡ ಮಟ್ಟಿನ ಸಹಾಯವಾಗುತ್ತದೆ.
3. ಆರ್ಥಿಕ ಸ್ಥಿತಿ ಸುಧಾರಣೆ ರೂಪಾಯಿಯ ಮೌಲ್ಯವು ಸುಮಾರು 87 ರಷ್ಟು ಹೆಚ್ಚಾದರೆ ಜನರ ಆದಾಯವು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಸಾವಿರ ರೂಪಾಯಿ ಸಂಪಾದಿಸುವವರು  ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ ಇದರಿಂದ ದೇಶದಲ್ಲಿ ಖರೀದಿಸುವ ವಸ್ತುಗಳ ಸಂಖ್ಯೆ ಹೆಚ್ಚಾಗಿ ದೇಶದ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗುತ್ತವೆ.
4.ವಿದೇಶಿ ಪ್ರವಾಸ ಸುಲಭ ವಿದೇಶಕ್ಕೆ ಹೋಗುವುದು ಎಲ್ಲರ ಕನಸಾಗಿರುತ್ತದೆ ಆದರೆ ಇದು ಪ್ರಸ್ತುತ ವೆಚ್ಚದಾಯಕವಾಗಿರುತ್ತದೆ  ಒಂದು ವೇಳೆ ರೂಪಾಯಿ ಬೆಲೆ ಡಾಲರ್ ಗೆ ಸಮನಾದರೆ  ವಿದೇಶಿ ಪ್ರವಾಸ ಬಡವರಿಗೆ ಸುಲಭವಾದ ದರದಲ್ಲಿ ದೊರೆಯುತ್ತದೆ ಅಮೆರಿಕಕ್ಕೆ ಹೋಗಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದಾರೆ ಅದು ಈಗ ನೂರಾರು ರೂಪಾಯಿಗಳಲ್ಲಿ ಮುಗಿದು ಹೋಗಬಹುದು ರೂಪಾಯಿ ಬೆಲೆ ಡಾಲರ್ ಗೆ ಸಮನಾದರೆ ಭಾರತೀಯರಿಗೆ ಸಿಗುವ ಅತ್ಯಂತ ದೊಡ್ಡವಾದ ಲಾಭ ಯಾವುದು ಗೊತ್ತಾ? ವಿದೇಶಿ ವಿನಿಮಯ  ದರ ವ್ಯತ್ಯಾಸದಿಂದಾಗಿ ಹಣ ಉಳಿತಾಯ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಉದ್ಯೋಗಿಗೂ ಹೆಚ್ಚು ಸಂಬಳ ಹೆಚ್ಚು ಸಿಗುತ್ತಿದ್ದರೆ ಯಾರು ವಿದೇಶಕ್ಕೆ ಹೋಗಲು  ಬಯಸುತ್ತಿರಲಿಲ್ಲ ಅಂತಹ ಉತ್ತಮ ಪರಿಸ್ಥಿತಿ ನಮ್ಮಲ್ಲಿದ್ದರೆ ಯಾರು ದೇಶ ಬಿಟ್ಟು ಹೋಗಲು ಬಯಸುವುದಿಲ್ಲ ರೂಪಾಯಿ ಬೆಲೆ ಡಾಲರ್ ಗೆ ಸಮನಾದರೆ ಬುದ್ದಿವಂತರು ದೇಶದಲ್ಲಿ ಉಳಿಯುತ್ತಾರೆ ಇದರಿಂದಾಗಿ ಬ್ರೆಡ್ ರೇನ್ ಸಂಪೂರ್ಣವಾಗಿ ನಿಲ್ಲುತ್ತದೆ ಅಂದ ವ್ಯಕ್ತಿಗಳು ಭಾರತದಲ್ಲಿ ಕೆಲಸ ಮಾಡುವುದರಿಂದ ದೇಶದ ಅಭಿವೃದ್ಧಿಯು ಬೆಳವಣಿಗೆಯು ಬೆಳೆಯುತ್ತದೆ.

                               

  
 ರೂಪಾಯಿ ಮೌಲ್ಯ ಡಾಲರ್ ಗೆ ಸಮನಾದರೆ ಅದರಿಂದ ಅನುಕೂಲ ಮಾತ್ರ ಅಲ್ಲ ಕೆಲವು ಅನಾನುಕೂಲಗಳನ್ನು  ತರುತ್ತದೆ, ಆಮದು ಅಗ್ಗವಾಗುತ್ತದೆ ರಫ್ತು ಸಂಪೂರ್ಣವಾಗಿ ಖುಷಿಯುತ್ತದೆ  2018 19 ರಲ್ಲಿ ನಮ್ಮ ರಫ್ತೆಗಳು ಜಿಡಿಪಿಗೆ ಶೇಕಡ 31%ರಷ್ಟು ಕೊಡುಗೆ ನೀಡಿದ್ದರೆ 2019-20 ರಲ್ಲಿ ಶೇಕಡ 27ರಷ್ಟು ಕುಸಿದಿತ್ತು. ಒಂದು ರೂಪಾಯಿ ಒಂದು ಡಾಲರ್ ಗೆ ಸಮನಾದರೆ ರಫ್ತುಗಳಿಗೆ ಬಾರಿ ನಷ್ಟವಾಗುತ್ತದೆ ಇದರಿಂದ ಜಿಡಿಪಿ ಕುಸಿಯುತ್ತದೆ ಬೇರೆ ದೇಶಗಳು ನಮ್ಮ ದೇಶದಿಂದ ಕೊಂಡುಕೊಳ್ಳಲು ಮುಖ್ಯ ಕಾರಣವೇನೆಂದರೆ ನಮ್ಮ ದೇಶದ ರೂಪಾಯಿ ಬೆಲೆ ಕಡಿಮೆ ಇರುವುದರಿಂದ ಅವರಿಗೆ ಹೆಚ್ಚು ಸರಕುಗಳು ದೊರೆಯುತ್ತವೆ ಒಂದು ವೇಳೆ ರೂಪಾಯಿ ಡಾಲರ್ ಗೆ ಸಮನಾದರೆ ಭಾರತದಿಂದ ಅವರಿಗೆ ರಫ್ತು ಮಾಡಿಕೊಳ್ಳುವುದು ದುಬಾರಿಯಾಗುತ್ತದೆ, ಇದರಿಂದಾಗಿ ನಮ್ಮ ರಫ್ತುಗಳು ಕುಸಿದು ಹೋಗುತ್ತವೆ. ರೂಪಾಯಿ ಡಾಲರ್ ಗೆ ಸಮನಾದರೆ ಬಡವರಿಗೆ ಸಹಾಯವಾಗುತ್ತದೆ ಆದರೆ ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರತ್ತುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಇದು ಭಾರತದ ಆರ್ಥಿಕತೆಗೆ ದೊಡ್ಡ ಪ್ರಮಾಣದ ಅಪಾಯ ತಂದುಡ್ಡಬಹುದು . ಒಂದು ವೇಳೆ ರೂಪಾಯಿ ಡಾಲರ್ ಗೆ ಸಮನಾದರೆ  ಬೇರೆ ಭಾರತವನ್ನು ಬಿಟ್ಟು ಬೇರೆ ದೇಶದಿಂದ ರಪ್ತನ್ನು  ಖರೀದಿಸಬಹುದು. ಬ್ಯಾಂಕಿಂಗ್ ಹಾಗೂ ಐಟಿ ಕ್ಷೇತ್ರಕ್ಕೂ ಇದರಿಂದ ದೊಡ್ಡ ಪ್ರಮಾಣದ ಹೊಡೆತ ಬೀಳುತ್ತದೆ.

       ಅಮೇರಿಕಾ ಒಂದು ಅಭಿವೃದ್ಧಿ ಹೊಂದಿದ ದೇಶ ಅದರ ಡಾಲರ್ ವಿಶ್ವದ ಅತ್ಯಂತ ಪ್ರಮುಖ ಕರೆನ್ಸಿಗಳಲ್ಲಿ ಒಂದು, ಜಪಾನ್ ಇದರ ಕರೆನ್ಸಿ ಮೌಲ್ಯ ಭಾರತಕ್ಕಿಂತಲೂ ಕಡಿಮೆ ಇದೆ ಒಂದು ರೂಪಾಯಿಗೆ ಒಂದು ಪಾಯಿಂಟ್ ಐದು ಸೊನ್ನೆ ಎನ್ ಸಿಗುತ್ತದೆ ಆದರೂ ಜಪಾನ್ ವಿಶ್ವದ ಅತ್ಯಂತ ಯಶಸ್ವಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಹೀಗಿರುವಾಗ ಭಾರತ ಹಕ್ಕು ಜಪಾನ್ ಎರಡು ದೇಶಗಳಲ್ಲಿ ಯಾವ ದೇಶ ಅಭಿವೃದ್ಧಿ ಹೊಂದಿದ ಎಂದು ಹೇಳುವ ಅಗತ್ಯವಿಲ್ಲ ಭಾರತದ ರೂಪಾಯಿ ಬಲವಾಗಿರಲಿ ಅಥವಾ ದುರ್ಬಲವಾಗಿರಲಿ ಅದಕ್ಕೂ ಅದರ ಅಭಿವೃದ್ಧಿಗೂ ನೇರವಾಗಿ ಸಂಬಂಧವಿಲ್ಲ ಕರೆನ್ಸಿ ಮೌಲ್ಯವು ಕೇವಲ ಒಂದು ಆರ್ಥಿಕ ಮೌಲ್ಯದ ಸಂಕೇತ ಮಾತ್ರ.
 
ಕರೆನ್ಸಿ ಬೆಳೆದರೆ ದೇಶ ಬೆಳೆಯುತ್ತದೆ ಎನ್ನುವುದುಕ್ಕಿಂತ ಆರ್ಥಿಕವಾಗಿ ಅಭಿವೃದ್ಧಿ  ಹೊಂದಿದರೆ ದೇಶ ಬೆಳೆಯುತ್ತದೆ ಎಂದು ಹೇಳಬಹುದು
 



Monday, 16 March 2026

ELON MUSK

 

The elon musk
     
ಜನನ : ಇವರು ಜೂನ್ 28 ರ 1971ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲ್ನ ಪ್ರಿಟೋರಿಯ ಎಂಬಲ್ಲಿ  ಜನಿಸುತ್ತಾರೆ. ಇವರ ತಾಯಿ ಮಾಯೆ ಮಾಸ್ಕ್ ಇವರು ಓರ್ವ ಮೋಡೆಲ್ ಹಾಗೂ ಡಯಟೇಶನ್ ಆಗಿದ್ದದವರು ಮತ್ತು ಇವರ ತಂದೆ ಎರರ್ಲ್ ಮಸ್ಕ್ ಈತ ಒಬ್ಬ ದಕ್ಷಿಣ ಆಫ್ರಿಕಾದ ಎಲೆಕ್ಟ್ರೋ ಮೆಕ್ಯಾನಿಕಲ್ ಇಂಜಿನಿಯರ್, ಪೈಲೆಟ್, ನಾವಿಕ ಹಾಗೂ ಪ್ರಾಪರ್ಟಿ ಡೆವೆಲಪರ್ ಆಗಿದ್ದವರು. 1980 ರಲ್ಲಿ ಇವರ ತಂದೆ ಹಾಗೂ ತಾಯಿ ಡೈವರ್ಸ್ ಪಡೆದಾಗ ಈವರು ತಮ್ಮ ತಂದೆಯ ಬಳಿ ಇರಲು ಇಚ್ಛೆಸುತ್ತಾರೆ. ಆದರೆ ಇವರ ಈ ನಿರ್ಧಾರಕ್ಕಾಗಿ ಮುಂದಿನ ಎರಡು ವರ್ಷ ಪಶ್ಚಾತಾಪ ಪಡಬೇಕಾಯಿತು ಕಾರಣ ಅವರೇ ಹೇಳುವಂತೆ ಅವರ ತಂದೆ ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿದ್ದರು ಸಹ ಒಬ್ಬ ವ್ಯಕ್ತಿಯಾಗಿ ಅದರಲ್ಲೂ ಒಬ್ಬ ತಂದೆಯಾಗಿ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿರಲಿಲ್ಲ ಮತ್ತು ಒಳ್ಳೆಯವನು ಆಗಿರಲ್ಲಿ ಎಂದು ಎಲೋನ್ ಮಸ್ಕ್ ಅಭಿಪ್ರಾಯ ಹೇಳಿದ್ದಾರೆ.

                                               


 ಕಲಿಕೆ : ಎಲನ್ ಮಸ್ಕ್ ಚಿಕ್ಕನಿನಿಂದಲೇ ತಮ್ಮ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು, ಕಂಪ್ಯೂಟರ್ ಸಾಫ್ಟ್ವೇರ್ ನಲ್ಲಿ ಆಸಕ್ತಿ ಬಳಸಿಕೊಂಡಿದ್ದ ಎಲಾನ್ ಮಸ್ಕ್ ತಮ್ಮ 12ನೇ ವಯಸ್ಸಿನಲ್ಲಿ ಆಗ ಬಳಕೆಯಲ್ಲಿದ್ದ 
 25 ಕಿಲಾವೆಟ್ ಸ್ಟೋರೇಜ್ನ ಕುಮಡೋ ವಿ ಸಿ ಟು ಫಿಫ್ಟಿ ಎಂಬ 80ರ ದಶಕದ ಹ್ಯಾಂಡಿ ಕಂಪ್ಯೂಟರ್ನಲ್ಲಿ ಬ್ಲಾಸ್ಟರ್ ಎಂಬ ತನ್ನದೇ ಆದ ಒಂದು ಸಣ್ಣ ವಿಡಿಯೋ ಗೇಮ್ ಅನ್ನು ಕಂಡು ಹಿಡಿದಿದ್ದರು. ತಾವು ಸಂಶೋಧನೆ ಮಾಡಿದ್ದ ಈ ಗೇಮ್ ಅನ್ನು PC( person computer) ಸಂಸ್ಥೆಗೆ  ಹಾಗೂ ಆಫೀಸ್ ಟೆಕ್ನಾಲಜಿ ಎಂಬ ಹೆಸರಿನ ಟೆಕ್ನಿಕಲ್ ಮ್ಯಾಕ್ಸಿಂಗೆ ಸುಮಾರು 500 ಡಾಲರ್ ಗೆ ಮಾರಿದ್ದರು. ಎಲೋನ್ ಮಸ್ಕ್ರಲ್ಲಿದ  ಅಸಾಧ್ಯ ಬುದ್ದಿಶಕ್ತಿಗೆ ಇದೊಂದು ಆರಂಭದ ಹಾಗೂ ಪ್ರಮುಖವಾದ ಉದಾಹರಣೆಯಾಗಿದೆ ಎನ್ನಬಹುದು.

                                                   

                 ಎಲಾನ್ ಮಸ್ಕ್ ರವರು Waterkloof  House Preparatory School and Bryanston High School ಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಮಧ್ಯಮ  ಶಿಕ್ಷಣವನ್ನು ಪಡೆದಿದ್ದರು, ನಂತರ Pretoria Boys High School ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಿದರು. ನಂತರ 1989 ರಲ್ಲಿ ಎಲಾನ್ ಮಸ್ಕ್ ರವರ ತಂದೆ ಪ್ರೇಟೋರಿಯಾದಲ್ಲೇ ಮುಂದಿನ ಶಿಕ್ಷಣವನ್ನು ಪೂರೈಸುವಂತೆ ಹೇಳಿದರು ಇದನ್ನು ನಿರಾಕರಿಸಿದ ಎಲಾನ್ ಮಸ್ಕ್ ರವರು ಅಮೇರಿಕಾಕ್ಕೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಹೊಂದುವ ಇಚ್ಛೆ ವ್ಯಕ್ತಪಡಿಸಿದ್ದರು. ವಿಶ್ವದ ರಾಷ್ಟ್ರಗಳಲ್ಲಿ ಅಮೇರಿಕಾ ಮಾಡಿದ ಹೆಸರು ಹಾಗೂ ಅದರ ಕೀರ್ತಿಯಿಂದಾಗಿ ಏನೇ ಸಾಧಿಸಿದರು ಅಮೆರಿಕ ಎಂಬ ಯಶಸ್ವಿ ದೇಶಗಳಲ್ಲಿ ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಎಲಾನ್ ಮಸ್ಕ್ ಬಂದಿದ್ದರು. ತನ್ನ ಕೆನಡಾ ಮೂಲದ ತಾಯಿಯ ಸಹಕಾರದಿಂದಾಗಿ ಅಮೆರಿಕಕ್ಕೆ ಹೋಗಲು ಇವರಿಗೆ ವೀಸಾ ಮತ್ತು ಪಾಸ್ಪೋರ್ಟ್ ದೊರೆಯಿತು. ಕೆನಡಾದಿಂದ ಬರಬೇಕಾಗಿದ್ದ ವೈಮಾನಿಕ ಹಾರಾಟದ ಡಾಕ್ಯುಮೆಂಟ್ಗಳು ಆತನ ಕೈ ಸೇರಲು ಇನ್ನೂ ಸಮಯವಿತ್ತು, ಈ ಅವಧಿಯಲ್ಲಿ ಸಮಯ ವ್ಯರ್ಥ ಮಾಡಬಾರದು ಎಂದು ಎಲಾನ್ ಮಸ್ಕ್  ಪ್ರೇಟೋರಿಯ ವಿವಿಯಲ್ಲಿ ಪದವಿಗೆ ಸೇರಿದ್ದರು. ಅಲ್ಲಿ 5 ತಿಂಗಳ ಕಲಿಕೆಯ ನಂತರ ಇತ್ತ ಡಾಕ್ಯುಮೆಂಟ್ಗಳು ದೊರೆತಾಗ ಅಮೇರಿಕಾಕ್ಕೆ  ಬಂದಿಳಿದರು.
                                                   

 ಮಸ್ಕ್ ಇನ್ ಅಮೇರಿಕಾ :  ಅಮೇರಿಕಾಕಕ್ಕೆ ಬಂದಿಳಿದ ಎಲಾನ್ ಮಸ್ಕ್ ರವರು ಅಲ್ಲಿನ ಕ್ವೀನ್ಸ್ ವಿವಿಗೆ ನೇಮಕವಾದರು. ಆದರೆ ಅಲ್ಲಿನ ದಕ್ಷಿಣ ಆಫ್ರಿಕಾದ ನಿವಾಸಿಗಳು ಕನಿಷ್ಠ ಎರಡು ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ನಿಯಮ ಇತ್ತು. ಎಲಾನ್ ಮಸ್ಕ್ ಅವರು ಅದನ್ನು ನಿರಾಕರಿಸಿ ಅಮೆರಿಕಕ್ಕೆ ಬಂದಿದ್ದರು. 1992 ರಲ್ಲಿ ಅಲ್ಲಿನ ಪೆನ್ಸಿಲ್ವೇನಿಯಾದ ವಿವಿ ಗೆ ಸೇರಿ ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರವನ್ನು ಆರಿಸಿಕೊಂಡಿದ್ದರು, ನಂತರ 1992 ರಲ್ಲಿ ಅಲ್ಲಿನ ವಾಟನ್ ಶಾಲೆಯಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡರು ಮತ್ತು ಅಲ್ಲಿನ ಕಲಾ ಹಾಗೂ ವಿಜ್ಞಾನದ ಕಾಲೇಜಿನಲ್ಲಿ ಬೌದ್ಧ ಶಾಸ್ತ್ರದ ಪದವಿಯನ್ನು ಸಹ ಪಡೆದರು. ಇದಕ್ಕೂ ಮುನ್ನ 1994ರಲ್ಲೇ ಎರಡು ಇಂಟೆಂಶಿಪ್ ಅಥವಾ ಡೆಸರ್ಟ್ಗಳನ್ನ ಅಲ್ಲಿನ ಸಿಲಿಕಾನ್ ವೇಲಿ ಹೊಂದಬೇಕಿತ್ತು, ಅದಕ್ಕಾಗಿ ಆತ ಅಲ್ಲಿನ ಹತ್ತಿರದ ಪಿನಾಕಲ್ ರಿಸರ್ಚ್ 
 ಸಂಸ್ಥೆಯೊಂದಕ್ಕೆ ಆಯ್ಕೆಯಾಗಿದ್ದ,  ಈ ಸಂಸ್ಥೆ ರಾಕೆಟ್ಗಳಿಗೆ ಎಲೆಕ್ಟ್ರೋಲೈಟಿಕ್ ಅಲ್ಟ್ರಾ  ಕೆಪಾಸಿಟರ್ಗಳನ್ನ  ಸಂಶೋಧಿಸುವ ಎನರ್ಜಿ ಸ್ಟೋರೇಜ್ ಸಂಸ್ಥೆಯಾಗಿದ್ದು ಎಲನ್ ರ ಬುದ್ದಿವಂತಿಕೆಯನ್ನು ಇಲ್ಲಿನ ಸಿಬ್ಬಂದಿ ಬಹುವಾಗಿ ಮೆಚ್ಚಿದರು. 1995 ರಲ್ಲಿ ಅಲ್ಲಿನ ಕ್ಯಾಲಿಫೋರ್ರಿಯಾದ ಟ್ರಾನ್ಸ್ಪೋರ್ಟ್ ವಿವಿಯಲ್ಲಿ ಎನರ್ಜಿ ಸೈನ್ಸ್ ಮೆಟೀರಿಯಲ್ ವಿಜ್ಞಾನದ ವಿಷಯಗಳಲ್ಲಿ ಪಿ ಎಚ್ ಡಿ ಗೋ ಆಯ್ಕೆಯಾದರು.
 
                                         



ಇಂಟರ್ನೆಟ್ ಸ್ಟಾರ್ಟ್ ಅಪ್ : 1995 ರ ವರ್ಷ ಎಲೊನ್ ಮಸ್ಕ್ರವರ ವೃತ್ತಿ ಜೀವನದ ಮೊದಲ ಹಾಗೂ ಅತ್ಯಂತ ಪ್ರಮುಖ ವರ್ಷವಾಗಿತ್ತು, ಮೊದಲಿಂದಾನೆ ಡಿ ಕೋಡಿಂಗ್ ಹಾಗೂ ಸಾಫ್ಟ್ವೇರ್ ನಲ್ಲಿ ಆಸಕ್ತಿ ಇರುವ ಎಲಾನ್ ಮಸ್ಕ್ ರವರು ತಮ್ಮ ಸಹೋದರ ಟಿಂಬನ್ ನ ಜೊತೆ ಸೇರಿ ಜಿಪ್ ಟೂ  ಎಂಬ 
 ವೆಬ್ ಸಾಫ್ಟ್ವೇರ್  ಎಂಬ ಕಂಪನಿಯನ್ನು ಆರಂಭಿಸಿದರು ಇದು ಅವತ್ತಿನ ಅಮೆರಿಕ ಪತ್ರಿಕಾ ಮಾಧ್ಯಮದ ಒಂದು ವೆಬ್ ಜಾಲದ ಸಿಟಿ ಗ್ರೇಟರ್ ಟ್ರೇ ಹಾಗೂ ದಿಕ್ಸೂಚಿಯ ಹಾಗೆ ಕೆಲಸ ನಿರ್ವಹಿಸಬಲ್ಲದಾಗಿತ್ತು ಆ ಬಳಕೆಯಲ್ಲಿದ್ದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ ಆಗಿದ್ದ ಜಾವಾದ ಮೂಲಕ ವಿಕ್ಟರ್ ಮ್ಯಾಪಿಂಗ್ ಹಾಗೂ ಡೈರೆಕ್ಷನ್ ಕೋಡ್ ಗಳನ್ನು ಮಸ್ಕ್ ಅಭಿವೃದ್ಧಿಪಡಿಸುತ್ತಿದ್ದರು. ಹೀಗೆ ಎಲೊನ್ ಮುಂದೆ x.com ಇ-ಮೇಲ್ ಮೂಲಕ ಹಣ ಕಳಿಸುವ ಸಂಸ್ಥೆಯನ್ನು ಅಭಿವೃದ್ಧಿಪಡಿಸಿದರು ಇದು ಮುಂದೆ ಪೇಪಲ್ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು ಇದು ಮುಂದೆ ಇಬೆ ಎಂಬ ಸಂಸ್ಥೆ ಒಂದುವರೆ ಬಿಲಿಯನ್  ಕೊಟ್ಟು ಖರೀದಿ ಮಾಡಿತು. ಇದಾದ ಮೇಲೆ ಎಲಾನ್ ಮಸ್ಕ್ ಟೆಸ್ಲಾ ಹಾಗೂ ಸ್ಪೆಸಕ್ಸ್ ಕಂಪನಿಯನ್ನು ಕಟ್ಟಿದರು.                
                                   
Tesla

        
                                          
Spacex
ಎಲೊನ್ ಮಸ್ಕ್ ಒಬ್ಬ ಯಶಸ್ವಿ ಉದ್ಯಮಿ ಹಾಗೂ ಜಗತ್ತಿನ ಶ್ರೀಮಂತ ವ್ಯಕ್ತಿ ಅಷ್ಟೇ ಅಲ್ಲದೆ ಒಬ್ಬ ಇನ್ಸ್ಪಿರೇಷನ್  ಆಗಿ ಹೊರಹೋಮ್ಮಿದ್ದಾರೆ


                                       
                                          

                                         

Sunday, 31 December 2023

ಇಲ್ಲಿಯವರೆಗೆ ಕಂಡುಕೊಂಡ ಅತಿದೊಡ್ಡ ಸಮುದ್ರದ ಜೀವಿಗಳು /Biggest sea monsters in the world|

 

THE GRATE ASP TIRTLE   
                                                                                   THE GRATE ASP TIRTLE - ಇದೊಂದು ಅತೀ ದೊಡ್ಡ ಆಮೆಯಾಗಿದೆ, ಈ ಆಮೆಯ ದೂರವನ್ನು ನೋಡಿದರೆ ಒಂದು ದೊಡ್ಡ ಪರ್ವತದ ಹಾಗೆ ಕಾಣಿಸುತ್ತದೆ,ಈ ಸಮುದ್ರದಲ್ಲಿ ಈಜುವಾಗ ದೊಡ್ಡ ಅಲೆಗಳು ಉಂಟಾಗುತ್ತವೆ.ಇದು ಪ್ರಪಂಚದಲ್ಲಿ ಅವಳ ಪ್ರಬೇಧದಲ್ಲೆ ಅತ್ಯಂತ ದೊಡ್ಡ ಆಮೆ ಎನ್ನಬಹುದು.                                                                                                                                                      
MEGALODON SHARK
                                                                                   MEGALODON SHARK -ನಾವು ಇಲ್ಲಿ ಕಂಡುಕೊಂಡಿರುವ ಗ್ರೇಟ್ ವೈಟ್ ಶಾರ್ಕ್ ಮೀನು ನಾವು ಕಂಡುಹಿಡಿದಿದ್ದು ದೊಡ್ಡ ಶಾರ್ಕ್, ಆದರೆ ವೈಟ್ ಶಾರ್ಕ್ ಮಿನಿ ಆಗಿರಲಿ ಶಾರ್ಕ್ ಮೈನ್ ಆಗಿರಲಿ `ಮೇಘಲೋಡಾನ್ ಶಾರ್ಕ್ ಮೀನಿನ ಮುಂದೆ ಚಿಕ್ಕದಾಗಿ ಕಾಣಿಸಿಕೊಂಡಿದೆ, ಇದು ಕೆಲವು ವರ್ಷಗಳ ಹಿಂದೆ ಸಮುದ್ರದಲ್ಲಿ ವಾಸಿಸುತ್ತಿದೆ. ಮಾಹಿತಿ ಇದೆ. ಆದರೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಏಕೆಂದರೆ ನಾವು ಸಮುದ್ರದ ಬಗ್ಗೆ ತಿಳಿದುಕೊಂಡಿರುವುದು ಕೇವಲ 5%ಮಾತ್ರ.                                                                                                                                                                                                 
                                     GLANT SQUID                                             GLANT SQUID- ಈ ಗ್ಲಾಂಟ್ ಸ್ಕ್ವಿಡ್ ನ ತೂಕ ಸುಮಾರು 1 ಟನ್ ಇರುತ್ತದೆ.ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳ ಕಣ್ಣುಗಳು ಈ ಜೀವಿಯ ಕಣ್ಣುಗಳು ತುಂಬಾ ದೊಡ್ಡದಾಗಿರುತ್ತವೆ, ಇದು ಅಪಾಯಕಾರಿಯಾದದ್ದಲ್ಲದೆ ಬೇಟೆಯಾಡುವ ರೀತಿ ಕೂಡ ಭಯಂಕರವಾಗಿರುತ್ತದೆ. ಅಷ್ಟು ಸುಲಭವಾಗಿ ನೋಡಲು ಸಾಧ್ಯವಿಲ್ಲ ಏಕೆಂದರೆ ಇದು ಸಮುದ್ರದಲ್ಲಿ 2000 ಅಡಿ ಆಳದಲ್ಲಿ ಕಂಡುಬರುತ್ತದೆ.ಒಬ್ಬ ಸಾಮಾನ್ಯ ವ್ಯಕ್ತಿ ಅಷ್ಟು ಆಳವಾಗಿ ಹೋಗುವುದು ತುಂಬಾ ಅಪಾಯಕರ.                                                                                                                                                
ಲೋಚ್ ನೆಸ್ ಮಾನ್ಸ್ಟರ್ 
                                  
                                                                                
LOCH NESS MINSTER - ಈ ಪ್ರಪಂಚದಲ್ಲಿ ಎಷ್ಟೋ ಜೀವಿಗಳು ರಹಸ್ಯವಾಗಿ ಉಳಿದುಹೋಗಿವೆ ಈ ರೋಚ್ ನೆಸ್ ಮೊಂಸ್ಟರ್ ಕೂಡ ಒಂದು. ಕೆಲವು ಜನ ಈ ಜೀವಿಗಳನ್ನು ನೋಡಿದ್ದೀವಿ ಎಂದು ಕೂಡ ಹೇಳುತ್ತಿದ್ದಾರೆ ಆದರೆ ಕೆಲವು ಕಲ್ಪನೆ ಎಂದು ಹೇಳುತ್ತಿದ್ದಾರೆ.1934 ರಲ್ಲಿ ಬಿಡುಗಡೆಯಾದ ಲೊಚ್ ನೆಸ್ ಮಾನ್ಸ್ಟರ್ ನ ಫೋಟೋಗೆ ಲೋಚ್ ನೆಸ್ ಮಾನ್ಸ್ಟರ್ ನ ಇರುವಿಕೆಯನ್ನ ಪರಿಚಯಿಸಿತ್ತು.(ಈ ಫೋಟೋವನ್ನು ರಾಬರ್ಟ್ ವಿಲಸೆನ್ ಎಂಬವರು ತೆಗೆದಿದ್ದಾರೆ ).                                                                                                               
ಗ್ರೇಟ್ ವೈಟ್ ಶಾರ್ಕ್  
                                                                                   ಗ್ರೇಟ್ ವೈಟ್ ಶಾರ್ಕ್- ಇದು ಸಮುದ್ರದಲ್ಲಿ ವಾಸಿಸುವ ಜೀವಿಗಳಲ್ಲಿ ಅತ್ಯಂತ ಭಯಂಕರವಾದದ್ದು ಎಂದು ಹೇಳಬಹುದು. ನಿಲಿ ತಿಂಗಲ ಗಾತ್ರದಲ್ಲಿ ದೊಡ್ಡದಾಗಿರದಿದ್ದರೂ ಸಹ ಒಂದು ಆನೆಯಷ್ಟು ದೊಡ್ಡದಾಗಿದ್ದರೂ, ಇದರ ಹಲ್ಲುಗಳು ತುಂಬಾ ಭಯಾನಕವಾಗಿರುತ್ತವೆ.ಈ ತಿಂಗಲಗಳ ಉದ್ದ ಸುಮಾರು 7ಮೀಟರ್ಗಳಷ್ಟು ಇರುತ್ತದೆ.ಈ ಶಾರ್ಕ್ ಮೀನುಗಳು ಗಂಟೆಗೆ 55ಕಿಮೀ ದೂರದಲ್ಲಿ ಹೋಗಬಲ್ಲವು, ಈ ಶಾರ್ಕ್ ಮೀನುಗಳು ಸುಮಾರು 300ರಷ್ಟು ಎತ್ತರದ ಹಲ್ಲುಗಳು ಇವೆ ಎಂದರೆ ತುಂಬಾ ಶಾರ್ಪ್ ಆಗಿರಬಹುದು, ಅದೇ ರೀತಿಯ ಪ್ರಾಣಿಗಳು ತುಂಡಾಗುತ್ತವೆ. ಮಾಡಿಬಿಡುತ್ತವೆ.                                                                                                                        
ಬುಲ್ ಎಲಿಫೆಂಟ್ ಸೀಲ್  
                                                                                        BULL ELEPHANT SEAL- ಇದರ ತೂಕ ಸರಿ ಸುಮಾರು 5000kg ಇರುತ್ತದೆ ಅಂದರೆ ವೈಟ್ ಶಾರ್ಕ್ ನಿಮಿಷಕ್ಕಿಂತ ಎರಡುಪಟ್ಟು ಜಾಸ್ತಿ.ಈ ಜೀವಿ 6.8ಮೀಟರ್ ಉದ್ದ,22.5ಮೀಟರ್ ಅಗಲವಿದೆ.ಈ ಜೀವಿ ಕೇವಲ ಅಂಟಾ ರ್ಟಿಕ್ ಸಮುದ್ರಲ್ಲಿ ಮಾತ್ರ ಕಂಡು ಬರುತ್ತದೆ.                                                              
        LION'S MANE JELLYFISH         
                                                                                  LION'S MANE JELLYFISH- ಇದರ ತೂಕ ಸುಮಾರು 1000kg ಯವರೆಗೆ ಇರುತ್ತದೆ. ಇದು ಅದರ ಉದ್ದದ ಮೂಲಕ ಅಷ್ಟು ತೂಕವನ್ನು ಹೊಂದಿದೆ ಎಂದು ಹೇಳಬಹುದು.ಇ ಜೀವಿ 37ಮೀಟರ್ಗಳಷ್ಟು ಉದ್ದ ಬೆಳೆಯುತ್ತದೆ, ಅಂದರೆ 124.4ಫೇಟ್ಗಳವರೆಗೆ ಇರುತ್ತದೆ.

THE BIG BULL HARSHAD MEHTA

                                                     THE BIGG BULL 1980 ರಲ್ಲಿ Bombay stock exchange ನಲ್ಲಿ ಕಾಲಿಟ್ಟು ಮುಂದಿನ 10 ವರ್ಷಗಳಲ್ಲಿ ಮಾಮೂ...